ಛಪಾಕ್ ಬೆನ್ನಲ್ಲೇ ತೆರಿಗೆ ವಿನಾಯಿತಿ ಪಡೆದ 'ತಾನಾಜಿ' ಅಜಯ್ ದೇವಗನ್ ಅಭಿನಯದ ಬಾಲಿವುಡ್ ಚಿತ್ರ ತಾನಾಜಿಗೆ ಮಹಾರಾಷ್ಟ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಮುಂಬೈ: ಅಜಯ್ ದೇವಗನ್ ಅಭಿನಯದ ಬಾಲಿವುಡ್ ಚಿತ್ರ ತಾನಾಜಿಗೆ ಮಹಾರಾಷ್ಟ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.ಮರಾಠರ ವೀರ ನಾಯಕ ತಾನಾಜಿ ಮಾಲುಸರೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅತ್ಯಂತ ಆತ್ಮೀಯ ಸ್ನೇಹಿತನಾಗಿದ್ದ. ವೀರ ಮರಾಠ ಯೋಧ ಸುಬೇದಾರ್‌ ತಾನಾಜಿ ಮಾಲುಸರೆ ಅವರ ಜೀವನ ಕಥೆಯುಳ್ಳ ಈ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಚಿತ್ರಕ್ಕೆ ಮಹಾರಾಷ್ಟ್ರ ಸರ್ಕಾರ ಬಂಪರ್ ಉಡುಗೊರೆ ನೀಡಿದ್ದು, ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಈ ಹಿಂದೆ ಆಸಿಡಾ ದಾಳಿ ಸಂತ್ರಸ್ಥೆ ಕುರಿತಾದ ನಟಿ ದೀಪಿಕಾ ಪಡುಕೋಣೆ ಅಭಿನಯದ ಚಪಾಕ್ ಚಿತ್ರಕ್ಕೆ ಹಲವು ರಾಜ್ಯ ಸರ್ಕಾರಗಳು ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.