ಕೊಳೆತ ಸ್ಥಿತಿಯಲ್ಲಿ ಬಾಲಿವುಡ್ ನಟ ಆನಂದ್ ಮಹೇಶ್ ಮೃತದೇಹ ಪತ್ತೆ ಬಾಲಿವುಡ್ ನಟ ಮಹೇಶ್ ಆನಂದ್ ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಬಾಲಿವುಡ್ ನಟ ಮಹೇಶ್ ಆನಂದ್ ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಇದು ಆತ್ಮಹತ್ಯೆ ಅಲ್ಲ ಎಂದಿದ್ದಾರೆ. ಅಲ್ಲದೇ, ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ನೋಟ್ ಗಳು ಕೂಡಾ ದೊರಕಿಲ್ಲ. ಕಳೆದ ತಿಂಗಳು ಬಿಡುಗಡೆಯಾದ ಗೋವಿಂದ್ ಅಭಿನಯದ ರಂಗೀಲಾ ರಾಜಾ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದ 57 ವರ್ಷದ ಮಹೇಶ್ ಆನಂದ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಅಂದೇರಿಯಲ್ಲಿನ ಅವರ ಮನೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದಲ್ಲಿನ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ.