ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು ಬದಲಾವಣೆ ಮಾಡಿ: ಕಂಗನಾ ರಣಾವತ್ ಹೊಸ ವಿವಾದ ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಂಡಿಯಾ ಎಂಬುದು ಬ್ರಿಟಿಷರ ನೀಡಿದ ಹೆಸರು ಇದನ್ನು ಬದಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಂಡಿಯಾ ಎಂಬುದು ಬ್ರಿಟಿಷರ ನೀಡಿದ ಹೆಸರು ಇದನ್ನು ಬದಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಗುಲಾಮರು ಇಟ್ಟಿರುವ ಇಂಡಿಯಾ ಹೆಸರನ್ನು ಬದಲಾವಣೆ ಮಾಡಿ, ಭಾರತ್‌ ಎಂದು ಮರುನಾಮಕರಣ ಮಾಡಬೇಕು ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಕಂಗನಾ ತಮ್ಮ ಪೋಸ್ಟ್‌ನಲ್ಲಿ ‘ಭಾರತ್‌’ ಅರ್ಥದ ಬಗ್ಗೆ ವಿವರಣೆಯನ್ನು ನೀಡಿದ್ದಾರೆ. ಭಾರತ್‌ ಎಂಬುದು ಮೂರು ಸಂಸ್ಕೃತ ಅಕ್ಷರಗಳಿಂದ ಕೂಡಿದ ಪದವಾಗಿದೆ. ಭಾ( ಭಾವ್‌), ರ(ರಾಗ್‌), ತ( ತಾಳ್) ಪದಗಳಿಂದ ಭಾರತ್‌ ಆಗಿದೆ. ಭಾವ, ರಾಗ, ತಾಳಗಳಿದ ಕೂಡಿರುವುದೇ ಭಾರತ ( -, -,-) ಎಂದು ಕಂಗನಾ ವಿವರಣೆ ನೀಡಿದ್ದಾರೆ.ಯೋಗ, ಗೀತಾ, ವೇದಗಳಲ್ಲೂ ಭಾರತದ ಹೆಸರು ಪ್ರಸ್ತಾಪವಾಗಿದೆ. ಜಗತ್ತಿಗೆ ಹೊಸ ನಾಗರೀಕತೆಯನ್ನು ಕೊಟ್ಟ ಭಾರತೀಯರು, ಬ್ರಿಟಿಷರು ಇಟ್ಟ ಹೆಸರನ್ನು ತೆಗೆದು ಭಾರತ್‌ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.