ರಾಣಿ ಮುಖರ್ಜಿ, ಆದಿತ್ಯ ಚೋಪ್ರಾಗೆ ಹೆಣ್ಣು ಮಗು ನಟಿ ರಾಣಿ ಮುಖರ್ಜಿ ಮತ್ತು ನಿರ್ದೇಶಕ-ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಬುಧವಾರ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಅದಿರಾ ಎಂದು ಕರೆದಿದ್ದಾರೆ. ಈ ಮಗು ಮುಂಬೈ: ನಟಿ ರಾಣಿ ಮುಖರ್ಜಿ ಮತ್ತು ನಿರ್ದೇಶಕ-ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಬುಧವಾರ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಅದಿರಾ ಎಂದು ಕರೆದಿದ್ದಾರೆ. ಈ ಮಗು ದೇವರ ಅತಿ ದೊಡ್ಡ ಉಡುಗೊರೆ ಎಂದು ರಾಣಿ ಬಣ್ಣಿಸಿದ್ದಾರೆ. ಆರೋಗ್ಯಕರವಾಗಿರುವ ಮಗು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಜನಿಸಿದೆ. "ನನ್ನ ಹಿತೈಷಿಗಳು ಹಾಗು ಅಭಿಮಾನಿಗಳಿಗೆ ಧನ್ಯವಾದಗಳು" ಎಂದು ಯಶ್ ರಾಜ್ ಫಿಲಂಸ್ ಸಂಸ್ಥೆ ನೀಡಿರುವ ಹೇಳಿಕೆಯಲ್ಲಿ ರಾಣಿ ತಿಳಿಸಿದ್ದಾರೆ. "ನಮಗೆ ಇಂದು ದೇವರು ಅತಿ ದೊಡ್ಡ ಉಡುಗೊರೆಯಾಗಿ ಅದಿರಾಳನ್ನು ನೀಡಿದ್ದಾನೆ. ನಮ್ಮ ಅಭಿಮಾನಿಗಳು, ಗೆಳೆಯರು ಮತ್ತು ಹಿತೈಷಿಗಳು ನೀಡಿದ ಅಪರಿಮಿತ ಬೆಂಬಲಕ್ಕೆ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ಈ ಖುಷಿಯಿಂದ ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ" ಎಂದು ಕೂಡ ಅವರು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಸಂಬಂಧದಲ್ಲಿದ್ದ ರಾಣಿ ಮತ್ತು ಆದಿತ್ಯ ಏಪ್ರಿಲ್ ೨೦೧೪ರಲ್ಲಿ ಇಟಲಿಯಲ್ಲಿ ಮದುವೆಯಾಗಿದ್ದರು.