ಪ್ರೀತಿ ಜಿಂಟಾಗೆ ಕಣ್ಣೀರು ಹಾಕಿಸಿದ್ದ ಶಾರೂಖ್! ಪ್ರೀತಿ ಜಿಂಟಾ ಸಿನಿಮಾಕ್ಕೆ ಬಂದು 17 ವರುಷ ಆಯ್ತು ಅಂತ ಯಾರೋ ಅಭಿಮಾನಿ ಟ್ವಿಟರಿನಲ್ಲಿ ನೆನಪಿಸಿದ್ದ. ಹೀಗಾಗಿ ಪ್ರೀತಿ ಈಗ ಒಂದೊಂದೇ ಕತೆ ಹರವಿಡುತ್ತಿದ್ದಾಳೆ... ಪ್ರೀತಿ ಜಿಂಟಾ ಸಿನಿಮಾಕ್ಕೆ ಬಂದು 17 ವರುಷ ಆಯ್ತು ಅಂತ ಯಾರೋ ಅಭಿಮಾನಿ ಟ್ವಿಟರಿನಲ್ಲಿ ನೆನಪಿಸಿದ್ದ. ಹೀಗಾಗಿ ಪ್ರೀತಿ ಈಗ ಒಂದೊಂದೇ ಕತೆ ಹರವಿಡುತ್ತಿದ್ದಾಳೆ. ಈಗ ಆಕೆ ಹೇಳಿದ್ದು, `ನನ್ನನ್ನು ಅನೇಕ ಸಲ ಅಳಿಸಿರುವ ನಟ ಶಾರೂಖ್ ಒಬ್ಬನೇ' ಅನ್ನೋದು. ಶಾರೂಖ್ ಚಿವುಟಲೂ ಇಲ್ಲ, ಚುಂಬಿಸಲೂ ಇಲ್ಲ. ಹಾಗಾದರೆ ಹೇಗೆ ಅಳಿಸಿದ? ಪ್ರೀತಿ ಪಾಲಿಗೆ ಶಾರೂಖ್ ಸಿಕ್ಕಾಪಟ್ಟೆ ಭಾವನಾತ್ಮಕವಾಗಿ ನಟಿಸುತ್ತಾನಂತೆ. ದಿಲ್ ಸೇ, ವೀರ್ ಝಾರಾ, ಕಲ್ ಹೋ ನಾ ಹೋಗಳಲ್ಲಿ ಪ್ರೀತಿ ಜಿಂಟಾ, ಶಾರೂಖ್ ಜೊತೆ ನಟಿಸಿದ್ದಾಳೆ. ಶಾರೂಖ್ ಸಿನಿಮಾಗಳು ನಾವೇ ಆ ಕಷ್ಟದಲ್ಲಿ ಸಿಲುಕಿದ್ದೇವೆ ಎಂಬಷ್ಟು ಫೀಲ್ ಹುಟ್ಟಿಸುತ್ತವೆ. ಈ ಭಾವನಾತ್ಮಕ ನಟನೆ ಬೇರೆಯವರಿಂದ ಆ ಪ್ರಮಾಣದಲ್ಲಿ ಬಂದಿಲ್ಲ ಅನ್ನೋದು ಪ್ರೀತಿ ಮಾತು. @ !