ತನ್ನ ಹೊಸ ಚಿತ್ರ 'ಒನ್ ನೈಟ್ ಸ್ಟಾಂಡ್' ನ ಮೊದಲ ನೋಟ ಬಿಡುಗಡೆ ಮಾಡಿದ ಸನ್ನಿ ಲಿಯೋನ್ ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ತನ್ನ ಮುಂದಿನ 'ಒನ್ ನೈಟ್ ಸ್ಟಾಂಡ್' ಚಿತ್ರದ ಮೊದಲ ನೋಟವನ್ನು ಬಿಡುಗಡೆ... ನವದೆಹಲಿ: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ತನ್ನ ಮುಂದಿನ 'ಒನ್ ನೈಟ್ ಸ್ಟಾಂಡ್' ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಿರುವ ಸನ್ನಿ ಲಿಯೋನ್, '' ಎಲ್ಲರಿಗೂ ಹಾಯ್, ಇಲ್ಲಿ ನನ್ನ ಹೊಸ ಚಿತ್ರ ಒನ್ ನೈಟ್ ಸ್ಟಾಂಡ್ ನ ಮಾದಲ ನೋಟವಿದೆ'' ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಸನ್ನಿ ಲಿಯೋನ್, ವ್ಯಕ್ತಿಯೊಬ್ಬನನ್ನು ತಬ್ಬಿಕೊಂಡಿದ್ದಾಳೆ. ಆತನ ಬೆನ್ನು ಮಾತ್ರ ಕಾಣುತ್ತದೆ. ಸನ್ನಿ ಲಿಯೋನ್ ಳ ಮುಖದಲ್ಲಿ ತೀವ್ರವಾದ ಭಾವನಾತ್ಮಕ ಅಭಿವ್ಯಕ್ತಿ ಕಾಣುತ್ತದೆ. ಜಾಸ್ಮಿನ್ ಮೋಸಸ್ ಡಿ ಸೋಜ ನಿರ್ದೇಶಿಸಿರುವ ಚಿತ್ರ ಮುಂದಿನ ತಿಂಗಳು 22ರಂದು ತೆರೆಗೆ ಬರಲಿದೆ. ಸನ್ನಿ ಲಿಯೋನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡ ಸಾಲು ಈ ರೀತಿ ಇದೆ: !! @ #OneNightStandOn22April @jasminedsouza26