ಭಾರತದ ಮೊದಲ ತೃತೀಯ ಲಿಂಗಿಗಳ ಮ್ಯೂಸಿಕ್ ಬ್ಯಾಂಡ್ ನಲ್ಲಿ ಹೃತಿಕ್ ರೋಷನ್ ಅಭಿನಯ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಇದೀಗ ಭಾರತದ ಮೊದಲ ತೃತೀಯ ಲಿಂಗಿಗಳ ಮ್ಯೂಸಿಕ್ ಬ್ಯಾಂಡ್ ... ನವದೆಹಲಿ: ಕಳೆದ ಕೆಲ ದಿನಗಳಿಂದ ಕಂಗನಾ ರಾನಾವತ್ ಗೆ ಲೀಗಲ್ ನೊಟೀಸು ಕಳುಹಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಸುದ್ದಿಯಲ್ಲಿದ್ದ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಇದೀಗ ಭಾರತದ ಮೊದಲ ತೃತೀಯ ಲಿಂಗಿಗಳ ಮ್ಯೂಸಿಕ್ ಬ್ಯಾಂಡ್ ನಲ್ಲಿ ಅಭಿನಯಿಸಲಿದ್ದಾರೆ. ನಮ್ಮ ದೇಶದಲ್ಲಿ ತಯಾರಾಗುತ್ತಿರುವ ತೃತೀಯ ಲಿಂಗಿಗಳ ಮೊದಲ ಮ್ಯೂಸಿಕ್ ಬ್ಯಾಂಡ್ ನ ಹೆಸರು 6 ಪ್ಯಾಕ್ ಎಂದು. ಅದರಲ್ಲಿನ ಸಂಗೀತದ ಸಾಲು ಹೀಗೆ ಸಾಗುತ್ತದೆ. 'ಆಯೆ ರಾಜು ಡಿಜೆ ಕಾ ಮ್ಯೂಸಿಕ್ ಫ್ಲಾಪ್ ಹುವಾ, ಅಪುನ್ ಕಾ ತಾಲಿ ಹಿಟ್ ಹೋ ಗಯಾ'. ಇದನ್ನು ತಯಾರಿಸುತ್ತಿರುವುದು ಯಶ್ ರಾಜ್ ಫಿಲ್ಮ್ಸ್. ಮ್ಯೂಸಿಕ್ ಬ್ಯಾಂಡ್ ನಲ್ಲಿ 6 ಜನ ತೃತೀಯ ಲಿಂಗಿಗಳಿದ್ದು, ಅವರ ಜೊತೆ ಹೃತಿಕ್ ರೋಷನ್ ಇರುತ್ತಾರೆ. ಇವರು ಇತ್ತೀಚೆಗೆ ಹೃತಿಕ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಇದನ್ನು ಯಶ್ ರಾಜ್ ಫಿಲ್ಮ್ಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದೆ. ಇತ್ತೀಚೆಗೆ ಪಾದದ ಕೀಲಿನ ಗಾಯಕ್ಕೊಳಗಾಗಿದ್ದ ಹೃತಿಕ್ ರೋಷನ್ ಅದನ್ನು ಲೆಕ್ಕಿಸದೆ ತೃತೀಯ ಲಿಂಗಿಗಳ ಮ್ಯೂಸಿಕ್ ಬ್ಯಾಂಡ್ ಬಳಗವನ್ನು ಖುದ್ದು ಭೇಟಿಯಾಗಿ ಆ ಪ್ರಾಜೆಕ್ಟ್ ನಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿಸಿದ್ದರು. ಹೃತಿಕ್ ರೋಷನ್ ಮಹೆಂಜೊ ದಾರೊ ಮತ್ತು ಕಾಬಿಲ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.