ಮೈಸೂರು ಮೂಲದ ಆದಿಲ್ ಖಾನ್‌ ಕೈಹಿಡಿದ ನಟಿ ರಾಖಿ ಸಾವಂತ್; ಮದುವೆ ಫೋಟೊಗಳು ವೈರಲ್ ರಾಖಿ ಸಾವಂತ್ ಮತ್ತು ಮೈಸೂರು ಮೂಲದ ಉದ್ಯಮಿ ಹಾಗೂ ಅವರ ಬಹುಕಾಲದ ಗೆಳೆಯ ಆದಿಲ್ ಖಾನ್ ದುರಾನಿ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಹೂಮಾಲೆ ಧರಿಸಿ ಮತ್ತು ಪೇಪರ್‌ಗಳಿಗೆ ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಮುಂಬೈ: ರಾಖಿ ಸಾವಂತ್ ಮತ್ತು ಮೈಸೂರು ಮೂಲದ ಉದ್ಯಮಿ ಹಾಗೂ ಅವರ ಬಹುಕಾಲದ ಗೆಳೆಯ ಆದಿಲ್ ಖಾನ್ ದುರಾನಿ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಹೂಮಾಲೆ ಧರಿಸಿ ಮತ್ತು ಪೇಪರ್‌ಗಳಿಗೆ ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ.ರಾಖಿ ತನ್ನ ತಲೆಯ ಮೇಲೆ ದುಪಟ್ಟಾದೊಂದಿಗೆ ಗುಲಾಬಿ ಬಣ್ಣದ ಶರಾರಾವನ್ನು ಧರಿಸಿದ್ದರೆ, ಆದಿಲ್ ಖಾನ್ ಕಪ್ಪು ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಚಿತ್ರಗಳನ್ನು ನೋಡಿದರೆ, ಅದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿರುವಂತೆ ತೋರುತ್ತಿದೆ. ಆದರೆ, ದಂಪತಿಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. (@)ಫೋಟೊಗಳು ವೈರಲ್ ಆದ ಕೂಡಲೇ ರಾಖಿ ಸಾವಂತ್ ಅವರ ಅನೇಕ ಅಭಿಮಾನಿಗಳು ಆಕೆಯನ್ನು ಅಭಿನಂದಿಸಿದ್ದು, ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ್ದಾರೆ.ಇದನ್ನೂ ಓದಿ: ಬೇಡ ಅಂದ್ರು ಬಿಡದೆ ಪತಿಗೆ ಸಾರ್ವಜನಿಕವಾಗಿ ಚುಂಬಿಸಿದ ರಾಖಿ ಸಾವಂತ್, ವಿಡಿಯೋ ವೈರಲ್!ರಾಖಿ ಸಾವಂತ್ ಅವರು ಆದಿಲ್ ಜೊತೆ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು ಮತ್ತು ಕಳೆದ ವರ್ಷ ಮೇ ತಿಂಗಳಲ್ಲಿ ಕಾರ್ಯಕ್ರಮವೊಂದರಲ್ಲಿ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು.ಆದಿಲ್ ಜೊತೆಗೆ ಡೇಟಿಂಗ್ ಮಾಡುವ ಮುನ್ನ ರಾಖಿ ಅವರು ರಿತೇಶ್ ಅವರನ್ನು ವಿವಾಹವಾಗಿರುವುದಾಗಿ ತಿಳಿಸಿದ್ದರು. ಆದರೆ, ನಂತರ ಅವರಿಬ್ಬರೂ ಬೇರೆಯಾದರು.ಮಾಧ್ಯಮಗಳೊಂದಿಗೆ ಮಾತನಾಡುವಾಗ, ಅವರು ಆದಿಲ್ ಖಾನ್ ಅವರೊಂದಿಗೆ ನೆಲೆಗೊಳ್ಳುವ ಬಗ್ಗೆ ಮಾತನಾಡಿದ್ದರು.