ರಣವೀರ್ ಸಿಂಗ್ ಹುಟ್ಟುಹಬ್ಬಕ್ಕೆ 100,000 ಹರಳುಗಳಿಂದ ಕೂಡಿದ ಕಲಾಕೃತಿ ಗಿಫ್ಟ್ ನೀಡಿದ ಅಭಿಮಾನಿ! ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಯೊಬ್ಬರಿಂದ ವಿಶೇಷ ಉಡುಗೊರೆಯೊಂದನ್ನು ಸ್ವೀಕರಿಸಿದ್ದಾರೆ. ಮುಂಬೈ: ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಯೊಬ್ಬರಿಂದ ವಿಶೇಷ ಉಡುಗೊರೆಯೊಂದನ್ನು ಸ್ವೀಕರಿಸಿದ್ದಾರೆ.ಆಯೇಷಾ ಗಾಂಧಿ ಎಂಬ ಕಲಾವಿದೆಯೊಬ್ಬರು, ಸುಮಾರು 3 ತಿಂಗಳ ಅವಧಿಯಲ್ಲಿ 100,000 ಹರಳುಗಳಿಂದ ಮಾಡಿದ್ದ ಅದ್ಬುತ ಕಲಾಕೃತಿಯೊಂದನ್ನು ರಣವೀರ್ ಸಿಂಗ್ ಗೆ ತಮ್ಮ ತಾಯಿ ಶಗುನ್ ಚೌಧರಿ ಪರವಾಗಿ ಗಿಫ್ಟ್ ನೀಡಿದ್ದಾರೆ. ಶಗುನ್ ಚೌಧರಿ ರಣವೀರ್ ಸಿಂಗ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ.ಇದನ್ನೂ ಓದಿ: ರಾಕಿ ಭಾಯ್ ಸ್ಟೈಲ್ಗೆ ರಣ್ವೀರ್ ಸಿಂಗ್ ಫಿದಾ: ಕೆಜಿಎಫ್ ಚಾಪ್ಟರ್-2 ಬಗ್ಗೆ ಪ್ರತಿಕ್ರಿಯೆ!ಕಲಾಕೃತಿ ಮುಂದೆ ಫೋಸ್ ನೀಡಿರುವ ರಣವೀರ್ ಸಿಂಗ್ ಅವರ ಫೋಟೋವನ್ನು ಅಯೇಷಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಾಯಿಯ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಏನಾದರೊಂದು ವಿಶೇಷವಾದ ಗಿಫ್ಟ್ ನೀಡಲು ಬಯಸಿದ್ದೆ. ಮೂರು ತಿಂಗಳಲ್ಲಿ ಇದನ್ನು ರಚಿಸಿದ್ದಾಗಿ ಅವರು ಬರೆದುಕೊಂಡಿದ್ದಾರೆ.