ತಾಪ್ಸಿಯ ಬೇಬಿ ಕೇರ್! ಎವರ್ ಯುಥ್ ಸ್ಕಿನ್‍ಕೇರ್ ಉತ್ಪನ್ನಗಳ ರೂಪದರ್ಶಿಯಾಗಿ ಸಹಿ ಹಾಕಿರುವ ಬಾಲಿವುಡ್ ನಟಿ ತಾಪ್ಸೀ ಪನ್ನು, ನಟಿಯೊಬ್ಬಳು ಎದುರಿಸುವ ಅತಿ ದೊಡ್ಡ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾಳೆ... ಎವರ್ ಯುಥ್ ಸ್ಕಿನ್‍ಕೇರ್ ಉತ್ಪನ್ನಗಳ ರೂಪದರ್ಶಿಯಾಗಿ ಸಹಿ ಹಾಕಿರುವ ಬಾಲಿವುಡ್ ನಟಿ ತಾಪ್ಸೀ ಪನ್ನು, ನಟಿಯೊಬ್ಬಳು ಎದುರಿಸುವ ಅತಿ ದೊಡ್ಡ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾಳೆ. ನಟನಾ ವೃತ್ತಿಯಲ್ಲಿ ಅತಿ ಹಿಂಸೆಗೆ ಒಳಗಾಗುವುದೇ ಚರ್ಮ. ಹತ್ತು ಹಲವು ಥರದ ಮೇಕಪ್ ಸಾಮಗ್ರಿಗಳು, ರಾಸಾಯನಿಕಗಳಿರುವ ಕಾಸ್ಮೆಟಿಕ್‍ಗಳು ಚರ್ಮವನ್ನು ಹಾಳು ಮಾಡಿಹಾಕುತ್ತವೆ. ಮೇಕಪ್ ಇಲ್ಲದೆ ಬದುಕಿಲ್ಲ ಎಂಬಂತೆ ಮಾಡಿಹಾಕುತ್ತವೆ ಎಂದು ಹೇಳುವ ತಾಪ್ಸೀ, ಚರ್ಮದ ಆರೋಗ್ಯದ ಬಗ್ಗೆ ಪಿಎಚ್‍ಡಿ ಮಾಡುವ ಲೆವೆಲ್ಲಿಗೆ ತಿಳಿದು ಕೊಂಡಿದ್ದಾಳಂತೆ. ಇಲ್ಲದಿದ್ದಲ್ಲಿ ತ್ವಚೆ ರಕ್ಷಣೆಯ ಉತ್ಪನ್ನಕ್ಕೆ ರೂಪದರ್ಶಿ ಆಗಲು ಒಪ್ಪಿಕೊಳ್ಳುತ್ತಿರಲಿಲ್ಲವಂತೆ. ಜಾಹೀರಾತು ಜನರನ್ನು ದಾರಿ ತಪ್ಪಿಸಬಾರದೆಂಬ ಕಾರಣಕ್ಕೆ ತಾನು ರೂಪದರ್ಶಿಯಾಗುವ ಉತ್ಪನ್ನಗಳ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳುತ್ತಾಳಂತೆ ಈ `ಬೇಬಿ' ಹೀರೋಯಿನ್. ಎಣ್ಣೆ ತಿಂಡಿಗಳಿಂದ ದೂರ ಇರಿ, ಹೆಚ್ಚಾಗಿ ನೀರು ಕುಡಿಯಿರಿ, ಪದೇಪದೆ ಮುಖ ತೊಳೆಯಿರಿ ಎಂದು ಸಲಹೆಗಳ ಸಾಲೇ ಹರಿಬಿಡುವ ತಾಪ್ಸೀಗೆ, ಸೌಂದರ್ಯ ಸಾಧನಗಳ ರೂಪದರ್ಶಿಯಾಗುವುದರಲ್ಲಿ ಹೆಚ್ಚಿನ ಖುಷಿಯಿದೆಯಂತೆ. ಇದು ತನ್ನ ಚಿತ್ರಗಳಿಗೂ ಪರೋಕ್ಷವಾಗಿ ಜಾಹೀರಾತು ನೀಡುತ್ತದೆ ಎಂಬುದು ಆಕೆಯ ನಂಬಿಕೆ.