ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ಮುಂಬೈನಲ್ಲಿ ನಿಧನ ಖ್ಯಾತ ಸಿನಿಮಾ ನಿರ್ದೇಶಕ ಮತ್ತು ಛಾಯಾಗ್ರಾಹಕ ಸಂಗೀತ್ ಶಿವನ್ ಅವರು ಮುಂಬೈನಲ್ಲಿ ನಿಧನರಾದರು ಎಂದು ಚಿತ್ರರಂಗದ ಮೂಲಗಳು ಬುಧವಾರ ತಿಳಿಸಿವೆ. ಮುಂಬೈ: ಖ್ಯಾತ ಸಿನಿಮಾ ನಿರ್ದೇಶಕ ಮತ್ತು ಛಾಯಾಗ್ರಾಹಕ ಸಂಗೀತ್ ಶಿವನ್ ಅವರು ಮುಂಬೈನಲ್ಲಿ ನಿಧನರಾದರು ಎಂದು ಚಿತ್ರರಂಗದ ಮೂಲಗಳು ಬುಧವಾರ ತಿಳಿಸಿವೆ.65 ವರ್ಷದ ಶಿವನ್ ಅವರನ್ನು ಅನಾರೋಗ್ಯದ ಕಾರಣ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾದರು ಎಂದು ಅವರು ಹೇಳಿದ್ದಾರೆ.ಸಂಗೀತ್ ಶಿವನ್ ಅವರು ಮಲಯಾಳಂ ಮತ್ತು ಹಿಂದಿಯಲ್ಲಿ ಸರಿಸುಮಾರು 20 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಾಲಿವುಡ್‌ನಲ್ಲಿ ಡಿಯೋಲ್ ಫ್ಯಾಮಿಲಿಯ ಯಮಲಾ ಪಗ್ಲಾ ದೀವಾನ-2 ಚಿತ್ರ, ಕ್ಯಾ ಕೂಲ್ ಹೈ ಹಮ್ ಮತ್ತು ಅಪ್ನಾ ಸಪ್ನಾ ಮನಿ ಮನಿ ಸೇರಿದಂತೆ ಹಲವು ಹಿಂದಿ ಸಿನಿಮಾಗಳಿಗೆ ಸಂಗೀತ್ ಶಿವನ್ ನಿರ್ದೇಶನ ಮಾಡಿದ್ದಾರೆ.ಸಂಗೀತ್ ಶಿವನ್ ಅವರು ಸೂಪರ್ ಸ್ಟಾರ್ ಮೋಹನ್‌ಲಾಲ್ ಜೊತೆಗೆ ಮೂರು ಪ್ರಮುಖ ಸಿನಿಮಾ ಮಾಡಿದ್ದಾರೆ. ಯೋಧಾ, ಗಂಧರ್ವಂ ಮತ್ತು ನಿರ್ನಾಯಂ ಈ ಮೂರು ಸಿನಿಮಾಗಳನ್ನ ಮೋಹನ್‌ಲಾಲ್ ಜೊತೆಗೆ ಸಂಗೀತ್ ಶಿವನ್ ಮಾಡಿದ್ದಾರೆ.ಸಂಗೀತ್ ಶಿವನ್ ಅವರು 1990 ರಲ್ಲಿ ವ್ಯೂಹಂ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪತ್ನಿ ಜಯಶ್ರೀ ಹಾಗೂ ಸಂಜನಾ ಮತ್ತು ಶಂತನು ಅವರನ್ನ ಅಗಲಿದ್ದಾರೆ. ಮಾಲಿವುಡ್ ಹಾಗೂ ಬಾಲಿವುಡ್‌ ಸಂಗೀತ್ ಶಿವನ್ ನಿಧನಕ್ಕೆ ಕಂಬನಿ ಮಿಡಿದಿದೆ.