ಥೂ, ನಿಮಗೆ ನಾಚಿಕೆಯಾಗಬೇಕು: ಅಭಿಮಾನಿಗೆ ಸೋನಾಕ್ಷಿ ತಿರುಗೇಟು ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳುತ್ತಿರುವ ನಟಿಯರಲ್ಲಿ ಸೋನಾಕ್ಷಿ ಸಿನ್ಹಾ ಕೂಡ ಒಬ್ಬರು. ಅವರು ಇತ್ತೀಚೆಗೆ... ನವದೆಹಲಿ: ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳುತ್ತಿರುವ ನಟಿಯರಲ್ಲಿ ಸೋನಾಕ್ಷಿ ಸಿನ್ಹಾ ಕೂಡ ಒಬ್ಬರು. ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ # ಎಂದು ಪ್ರತಿ ವಾರ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಾರೆ. ಮೊನ್ನೆ ಸೋಮವಾರ ಈ ರೀತಿಯ ಸಂವಾದದಲ್ಲಿ ಪ್ರತೀಕ್‌ ಗೋಯಲ್‌ ಎಂಬಾತ ಸೋನಾಕ್ಷಿ ಬಿಕಿನಿ ಪ್ರಶ್ನೆ ಕೇಳಿದ್ದಾನೆ. ಯಾವಾಗ ನಿಮ್ಮ ಮೈಮಾಟ ತೋರಿಸುತ್ತೀರಿ? ನೀವ್ಯಾವಾಗ ಬಿಕಿನಿ ಹಾಕುತ್ತೀರಿ..? ಎಂಬ ಅಧಿಕ ಪ್ರಸಂಗದ ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಮುಖಕ್ಕೆ ಹೊಡೆದಂತೆ ಉತ್ತರಿಸಿರುವ ಸೋನಾಕ್ಷಿ ಸಿನ್ಹಾ, "ಇದೇ ಪ್ರಶ್ನೆಯನ್ನು ನಿಮ್ಮ ತಾಯಿ ಮತ್ತು ತಂಗಿಗೆ ಕೇಳಿ. ಅವರು ಏನು ಹೇಳುತ್ತಾರೆ ಎನ್ನುವುದು ನನಗೆ ಬೇಕು' ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಉತ್ತರ ಬರುತ್ತಿದ್ದಂತೆ ಇಡೀ ಟ್ವೀಟರ್‌ ನಲ್ಲಿ ಸೋನಾಕ್ಷಿ ವಿಚಾರ ವೈರಲ್‌ ಆಗಿದ್ದು ಭರ್ಜರಿ ಚರ್ಚೆಯಾಗಿದೆ.ಸೋಮವಾರ ರಾತ್ರಿಯವರೆಗೆ ಟ್ವಿಟ್ಟರ್ ನಲ್ಲಿ ಸೋನಾಕ್ಷಿಯವರ ಹೆಸರೇ ಟ್ರೆಂಡಿಂಗ್ ಲ್ಲಿ ಇತ್ತು.