ನವಾಜುದ್ದೀನ್ ಸಿದ್ಧಿಖಿ ವಿರುದ್ಧ ಅವರ ಪತ್ನಿ ಮಾಡುತ್ತಿರುವ ಆರೋಪ ಸುಳ್ಳು, ಕೋರ್ಟ್ ಮೊರೆ ಹೋಗುತ್ತೇವೆ: ನಟನ ಸಹೋದರ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಅವರ ಪರಿತ್ಯಕ್ತ ಪತ್ನಿ ಆಲಿಯಾ ಮುಂಬೈ ಉಪನಗರ ವರ್ಸೊವಾ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟನ ಸೋದರ ಶಮಾಸ್ ನವಾಬ್ ಸಿದ್ಧಿಖಿ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಅವರ ಪರಿತ್ಯಕ್ತ ಪತ್ನಿ ಆಲಿಯಾ ಮುಂಬೈ ಉಪ ನಗರ ವರ್ಸೊವಾ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟನ ಸೋದರ ಶಮಾಸ್ ನವಾಬ್ ಸಿದ್ಧಿಖಿ ಆರೋಪ ಸುಳ್ಳು ಎಂದು ಹೇಳಿದ್ದಾರೆ.ತಮ್ಮ ಸೋದರ ಮತ್ತು ಕುಟುಂಬದ ಇತರ ನಾಲ್ವರು ಸದಸ್ಯರ ವಿರುದ್ಧ ದಾಖಲಾಗಿರುವ ಆರೋಪ ಸುಳ್ಳಾಗಿದ್ದು ಇದರ ವಿರುದ್ಧ ಮುಂಬೈ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.ನಾವು ಈ ಆರೋಪ, ದೂರಿನಿಂದ ವಿಚಲಿತರಾಗುವುದಿಲ್ಲ. ನನ್ನ ಸೋದರನ ವಿರುದ್ಧ ಅವರು ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು.ನೀವು ಹತ್ತಾರು ಸುಳ್ಳು ಆರೋಪಗಳನ್ನು ಮಾಡಿ ನಮ್ಮ ವಿರುದ್ಧ ದೂರು ಸಲ್ಲಿಸಬಹುದು. ಆದರೆ ನಮ್ಮ 30 ಕೋಟಿ ರೂಪಾಯಿ ಬೇಡಿಕೆಯನ್ನು ನೀವು ಈಡೇರಿಸುತ್ತೀರಾ ಎಂದು ಕೇಳಿದ್ದಾರೆ. , ’ & , ’ . & ’ .#SatyaMevJayateನಿನ್ನೆ ಅಪರಾಹ್ನ ಆಲಿಯಾ ಮುಂಬೈ ಉಪ ನಗರ ವರ್ಸೊವಾ ಪೊಲೀಸ್ ಠಾಣೆಯಲ್ಲಿ ನಟ ನವಾಜುದ್ದೀನ್ ಸಿದ್ಧಿಖಿ ವಿರುದ್ಧ ಅತ್ಯಾಚಾರ ಮತ್ತು ವಂಚನೆ ದೂರು ಸಲ್ಲಿಸಿದ್ದರು. ಅಲ್ಲದೆ ಅವರ ಕುಟುಂಬದ ಇತರ ನಾಲ್ವರ ವಿರುದ್ಧ ಸಹ ದೂರು ನೀಡಿದ್ದರು. ಇನ್ನೂ ಎಫ್ ಐಆರ್ ದಾಖಲಾಗಿಲ್ಲ, ದೂರನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.ಕಳೆದ ವಾರ ಉತ್ತರ ಪ್ರದೇಶದ ಮುಜಾಫರ್ ನಗರದ ಬುದಾನಾ ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆ ದಾಖಲು ಮಾಡಿದ್ದ ಆಲಿಯಾ ನವಾಜುದ್ದೀನ್ ಸಿದ್ದಿಖಿ ಮತ್ತು ಅವರ ಕುಟುಂಬದ ನಾಲ್ವರ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದರು.ನವಾಜುದ್ದೀನ್ ಸಿದ್ಧಿಖಿ ಅವರಿಂದ ತೊರೆದ ಬಳಿಕ ತಮ್ಮ ಹಿಂದಿನ ಅಂಜನಾ ಆನಂದ್ ಕಿಶೋರ್ ಪಾಂಡೆ ಎಂದು ಮರು ನಾಮಕರಣ ಮಾಡಿಕೊಂಡಿರುವ ಆಲಿಯಾ, ಮೊನ್ನೆ ಸೋಮವಾರ ಟ್ವೀಟ್ ಮಾಡಿ ನವಾಜುದ್ದೀನ್ ಸಿದ್ಧಿಖಿ ಅವರ ಸೋದರ ತಲೆಮರೆಸಿಕೊಂಡಿದ್ದು ಅಪರಾಧ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದಾರೆ ಎಂದು ಆರೋಪಿಸಿದ್ದರು.ಸಿದ್ಧಿಖಿ ಸೋದರ ಶಮಾಸ್ ನವಾಜುದ್ದೀನ್ ಸಿದ್ಧಿಖಿ ಮತ್ತು ತಮನ್ನಾ ಭಾಟಿಯಾ ಅವರ ನಟನೆಯಲ್ಲಿ ಬೋಲೆ ಚೂಡಿಯಾ ಎಂಬ ಬಾಲಿವುಡ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.