ಮುಫಾಸ ಸಿಂಹ ಜೊತೆ ಅಕ್ಷಯ್ ಕುಮಾರ್ ಸರಸ ಬಾಲಿವುಡ್‍ನ ಜಾಕಿಚಾನ್, ಟಾಮ್ ಕ್ರ್ಯೂಸ್ ಎಂದು ತನ್ನನ್ನು ತಾನೇ ಬಿಂಬಿಸಿಕೊಂಡಿರುವ ಅಕ್ಷಯ್ ಕುಮಾರ್ ಇನ್ನೊಂದು ಸಾಹಸ ಮೆರೆದಿದ್ದಾರೆ... ಬಾಲಿವುಡ್‍ನ ಜಾಕಿಚಾನ್, ಟಾಮ್ ಕ್ರ್ಯೂಸ್ ಎಂದು ತನ್ನನ್ನು ತಾನೇ ಬಿಂಬಿಸಿಕೊಂಡಿರುವ ಅಕ್ಷಯ್ ಕುಮಾರ್ ಇನ್ನೊಂದು ಸಾಹಸ ಮೆರೆದಿದ್ದಾರೆ. ಇವರ ಮುಂದಿನ 'ಸಿಂಗ್ ಈಸ್ ಬ್ಲಿಂಗ್' ಸಿನಿಮಾದಲ್ಲಿ ಸಿಂಹದೊಂದಿಗೆ ಕಾಣಿಸಿಕೊಂಡಿದ್ದಾರೆ. ಸ್ಪೋರ್ಟ್ಸ್ ಫ್ಯಾನ್ಸಿ ಹೇರ್‍ಕಟ್ ಮಾಡಲಾದ ಮುಫಾಸ' ಎಂಬ ಸಿಂಹ ಈ ಸಿನಿಮಾದ ಫಸ್ಟ್ ಲುಕ್‍ನಲ್ಲಿ ಸಖತ್ ಮಿಂಚುತ್ತಿದೆ. ಇದೇನು ಆ್ಯನಿಮೇಟೆಡ್ ಸಿಂಹ ಅಲ್ಲ ಎಂದಿದ್ದಾರೆ ಅಕ್ಷಯ್. ಇದರೊಂದಿಗೆ ನಟಿಸುವಾಗ ಅಕ್ಷಯ್ ಗೆ ಸಿಕ್ಕಾಪಟ್ಟೆ ಹೆದರಿಕೆ ಆಗಿತ್ತಂತೆ. ಕೋಪದಲ್ಲಿ ಗರ್ಜಿಸಿ, ಕೆಲವು ಗ್ಲಾಸ್‍ಗಳನ್ನು ಪುಡಿಪುಡಿ ಮಾಡಿತ್ತಂತೆ. ಇದಾದ ನಂತರ ಕೆಲವೇ ಗಂಟೆಗಳಲ್ಲಿ ಈ ಸ್ಟಿಲ್ಸ್ ಗಳ ಚಿತ್ರೀಕರಣ ನಡೆದಿದೆ. ಈ ಸಿನಿಮಾ ಅಕ್ಟೋಬರ್ 2ರಂದು ತೆರೆಕಾಣಲಿದೆ.