ನನ್ನ ಸಂಭಾವನೆ ಬಗ್ಗೆ ತೃಪ್ತಿ ಇದೆ: ಕರೀನಾ ಕಪೂರ್ ಬಾಲಿವುಡ್ ನಟಿಯರಿಗೆ ಉತ್ತಮ ಸಂಭಾವನೆ ನೀಡುವುದಿಲ್ಲ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಕರೀನಾ ಕಪೂರ್... ಕರಾಚಿ: ಬಾಲಿವುಡ್ ನಟಿಯರಿಗೆ ಉತ್ತಮ ಸಂಭಾವನೆ ನೀಡುವುದಿಲ್ಲ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಕರೀನಾ ಕಪೂರ್, ತಮ್ಮ ಸಂಭಾವನೆ ಬಗ್ಗೆ ತೃಪ್ತಿ ಮತ್ತು ಸಂತೋಷವಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ನಟ-ನಟಿಯೂ ತಮ್ಮ ವೇತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆದರೆ ನನಗೆ ಈ ಬಗ್ಗೆ ಅಸಮಾಧಾನವಿಲ್ಲ, ತೃಪ್ತಿಯಿದೆ ಎಂದಿದ್ದಾರೆ. ನಟಿಯಾಗಿ ನನಗೆ ಉತ್ತಮ ಸಂಭಾವನೆ ನೀಡಿಲ್ಲ ಎಂಬ ಬಗ್ಗೆ ನಾನೆಲ್ಲಿಯೂ ಹೇಳಿಕೊಂಡಿಲ್ಲ. ನಿಜ ಹೇಳಬೇಕೆಂದರೆ ನನಗೆ ಸಂತೋಷವಿದೆ. ಇಂದು ಪ್ರೇಕ್ಷಕರು ಉತ್ತಮ ಸಿನಿಮಾ ಮತ್ತು ಕಥೆಯನ್ನು ಬಯಸುತ್ತಾರೆಯೇ ಹೊರತು ನಟ-ನಟಿಯರ ಸಂಭಾವನೆ ಎಷ್ಟೆಂದು ತಿಳಿದುಕೊಳ್ಳಲು ಹೆಚ್ಚು ಇಷ್ಟಪಡುವುದಿಲ್ಲ ಎಂದು ಅವರು ಕರೀನಾ ಹೇಳಿದ್ದಾರೆ.