ಮತ್ತೆ ರಾಗಿಣಿ ಎಂಎಂಎಸ್, ಅಭಿಮಾನಿಗಳ ನಿದ್ದೆಗೆಡಿಸಿದ ಸನ್ನಿ ಲಿಯೋನ್; ಟೀಸರ್ ನೋಡಿ ಬಾಲಿವುಡ್ ಹಾಟ್ ಬೆಡಗಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಮತ್ತೆ ರಾಗಿಣಿಯಾಗುತ್ತಿದ್ದು, ಈ ಬಾರಿ ರಾಗಿಣಿ ಎಂಎಂಎಸ್ ರಿಟರ್ನ್ಸ್ ಸೀಸನ್ 2 ವೆಬ್ ಸರಣಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ಮುಂಬೈ: ಬಾಲಿವುಡ್ ಹಾಟ್ ಬೆಡಗಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಮತ್ತೆ ರಾಗಿಣಿಯಾಗುತ್ತಿದ್ದು, ಈ ಬಾರಿ ರಾಗಿಣಿ ಎಂಎಂಎಸ್ ರಿಟರ್ನ್ಸ್ ಸೀಸನ್ 2 ವೆಬ್ ಸರಣಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ.2014ರಲ್ಲಿ ಸನ್ನಿ, ರಾಗಿಣಿ ಎಂಎಂಎಸ್ 2 ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಬೇಬಿ ಡಾಲ್ ಹಾಡು ಸಖತ್ ಹವಾ ಮಾಡಿತ್ತು.ಈಗ ಮತ್ತೆ ರಾಗಿಣಿ ಎಂಎಂಎಸ್ ರಿಟರ್ನ್ಸ್ ನಲ್ಲಿ ಸನ್ನಿ ಬಣ್ಣ ಹಚ್ಚಲು ತಯಾರಾಗಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಸನ್ನಿ ಮಿಂಚಲಿದ್ದಾರೆ. ಈ ವೆಬ್ ಸರಣಿಯಲ್ಲಿ ಹಲೋ ಜಿ ಹಾಡಿಗೆ ಸನ್ನಿ ನರ್ತಿಸಲಿದ್ದು, ಮಿತ್ ಬ್ರದರ್ಸ್ ನೃತ್ಯ ಸಂಯೋಜನೆ ಮಾಡಿದ್ದಾರಂತೆ.ಈ ಕುರಿತು ಸ್ವತಃ ಸನ್ನಿ ಲಿಯೋನ್ ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಟೀಸರ್ ಒಂದನ್ನು ಹರಿಯ ಬಿಟ್ಟಿದ್ದಾರೆ.ಟೀಸರ್ನಲ್ಲಿ ನಟಿ ಸನ್ನಿ ಲಿಯೋನ್ ‘ಸನ್ನಿ ಇಲ್ಲದೆ ರಾಗಿಣಿ ಎಂಎಂಎಸ್? ಮಾಡಲು ಸಾಧ್ಯವಿಲ್ಲ! ‘ಎಂದು ಬರೆದುಕೊಂಡಿದ್ದಾರೆ. ಮಜಾ ಕೊಡಲು ನಾನು ಬರ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಹಾಗಾಗಿ ಸನ್ನಿ ಲಿಯೋನ್ ‘ರಾಗಿಣಿ ಎಂಎಂಎಸ್ ರಿಟರ್ನ್ಸ್‘ ವೆಬ್ ಸರಣಿ-2ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇನ್ನು ಈ ಬಾರಿ ವರುಣ್ ಸೂದ್ ಮತ್ತು ದಿವ್ಯಾ ಅಗರ್ವಾಲ್ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. # ?? !! ' ! #, ? , ! @ @ @divyaagarwal_official @varunsood12 @zee5premiumA (@) 21, 2019 11:07pm