'ಪಿಕೆ' ತಂಡದಿಂದ ಯಶಸ್ಸಿನ ಸಂಭ್ರಮಾಚರಣೆ ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ 'ಪಿಕೆ' ಸಿನೆಮಾ ಬುಧವಾರ ಚಿತ್ರತಂಡ ಸಂಭ್ರಮಾಚರಣೆಗಳಲ್ಲಿ ಮುಳುಗಲಿದೆ. ಮುಂಬೈ: ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ 'ಪಿಕೆ' ಸಿನೆಮಾ ಬುಧವಾರ ಚಿತ್ರತಂಡ ಸಂಭ್ರಮಾಚರಣೆಗಳಲ್ಲಿ ಮುಳುಗಲಿದೆ. ಅಮೀರ್ ಖಾನ್ ನಟನೆಯ ಈ ಚಿತ್ರ ಜಾಗತಿಕವಾಗಿ ೬೨೦ ಕೋಟಿ ರೂ ಗಳಿಕೆ ಕಂಡಿದೆ. ಬಾಲಿವುಡ್ ಇತಿಹಾಸದಲ್ಲೇ ಇದು ಅತಿ ಹೆಚ್ಚಿನ ಗಳಿಕೆ ಎನ್ನಲಾಗಿದೆ. ಭಾರತದಲ್ಲೇ ಈ ಸಿನೆಮಾ ೩೨೦ ಕೋಟಿ ಗಳಿಸಿದ್ದರೆ ವಿದೇಶಗಳಲ್ಲಿನ ಗಳಿಕೆ ೨೮೦ ಕೋಟಿ. ಈ ಗಳಿಕೆ ಇನ್ನೂ ಮುಂದುವರೆಯಲಿದೆ ಎನ್ನಲಾಗಿದೆ. ರಾಜಕುಮಾರ್ ಹಿರಾನಿ ನಿರ್ದೇಶನದ ಹಾಗು ವಿದು ವಿನೋದ್ ಚೋಪ್ರಾ ನಿರ್ಮಿಸಿರುವ ಈ ಚಲನಚಿತ್ರ ಚೈನಾದಲ್ಲಿ ಕಳೆದ ತಿಂಗಳು ಬಿಡುಗಡೆ ಕಂಡು ಚೈನಾದಲ್ಲೇ ೧೦೦ ಕೋಟಿ ಗಳಿಕೆಯನ್ನು ಮೀರಿದೆ. ಈ ಗಗನ ಗಳಿಕೆಯಯನ್ನು ಆಚರಿಸಲು ಇಡೀ ಚಿತ್ರತಂಡ ಇಂದು ಒಟ್ಟಾಗಲಿದೆ.