ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಮ್ಮ ಇಬ್ಬರು ಪುತ್ರಿಯರಿಗೆ ನೀಡಿದ ಅಮೂಲ್ಯ ಸಲಹೆ ತಂದೆಯ ಹಾದಿಯಲ್ಲೇ ಸಾಗುತ್ತಿರುವ ಇಬ್ಬರೂ ಪುತ್ರಿಯರು ಈಗಾಗಲೇ ಆನ್ ಲೈನಿನಲ್ಲಿ ಅಪಾರ ಅಭಿಮಾನಿಗಳು ಹಾಗೂ ಫಾಲೋವರ್ ಗಳನ್ನು ಹೊಂದಿದ್ದಾರೆ. ನವದೆಹಲಿ: ತಮ್ಮ ಮಕ್ಕಳು ಬೆಳೆಯುವುದನ್ನು ನೋಡಿ ಆನಂದಿಸದ ಪಾಲಕರಿಲ್ಲ. ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಕೂಡಾ ಅದಕ್ಕೆ ಹೊರತಾಗಿಲ್ಲ. ಅವರಿಗೆ ಇಬ್ಬರು ಪುತ್ರಿಯರು. ರಹೀಮಾ ರಹಮಾನ್ ಮತ್ತು ಖತೀಜಾ ರಹಮಾನ್.ಇದನ್ನೂ ಓದಿ: ವಿಶ್ವದಾಖಲೆ: ಜಗತ್ತಿನಲ್ಲೇ 20 ಕೋಟಿ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬ್ ಚಾನೆಲ್ ಭಾರತದ ಟಿ-ಸಿರೀಸ್ರೆಹಮಾನ್ ಅವರ ಇಬ್ಬರು ಪುತ್ರಿಯರೂ ಸಂಗೀತ ಸಾಧನೆಯಲ್ಲಿ ತೊಡಗಿದ್ದಾರೆ. ಅವರಿಬ್ಬರೂ ಈಗಾಗಲೇ ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂದೆಯ ಜೊತೆ ವೇದಿಕೆ ಮೇಲೆ ಸಂಗೀತ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: ಸ್ಪೋಟ್ಸ್ ಬ್ರಾ, ಶಾರ್ಟ್ಸ್ ಧರಿಸಿದ್ದ ಜಾಹ್ನವಿ ಕಪೂರ್ ಕಾಲೆಳೆದ ಅಭಿಮಾನಿಗಳಿಗೆ ತಕ್ಕ ಉತ್ತರ ಕೊಟ್ಟ ನಟಿ!ತಂದೆಯ ಹಾದಿಯಲ್ಲೇ ಸಾಗುತ್ತಿರುವ ಇಬ್ಬರೂ ಪುತ್ರಿಯರು ಈಗಾಗಲೇ ಆನ್ ಲೈನಿನಲ್ಲಿ ಅಪಾರ ಅಭಿಮಾನಿಗಳು ಹಾಗೂ ಫಾಲೋವರ್ ಗಳನ್ನು ಹೊಂದಿದ್ದಾರೆ. ತಮ್ಮ ಪುತ್ರಿಯರಿಗೆ ಎ.ಆರ್ ರೆಹಮಾನ್ ನೀಡುವ ಅಮೂಲ್ಯ ಸಲಹೆ ಎಂದರೆ ಹೋಲಿಕೆ ಮಾಡದಿರುವುದು.ಇದನ್ನೂ ಓದಿ: ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮದುವೆ: ಕಬೀರ್ ಖಾನ್, ಆನಂದ್ ತಿವಾರಿ ಮತ್ತಿತರ ಗಣ್ಯರಿಗೆ ಆಹ್ವಾನತಾವು ಹೆಸರಾಂತ ಸಂಗೀತಗಾರನಾಗಿರುವುದರಿಂದ ಜನರು ಪುತ್ರಿಯರ ಸಂಗೀತವನ್ನು ತಮ್ಮ ಸಂಗೀತಕ್ಕೆ ಹೋಲಿಕೆಯನ್ನು ಸಹಜವಾಗಿ ಮಾಡುತ್ತಾರೆ. ಆದರೆ ಪುತ್ರಿಯರು ಅಂಥಾ ಹೋಲಿಕೆಯನ್ನು ತಮಗೆ ತಾವೇ ಮಾಡಿಕೊಳ್ಲಬಾರದು. ಶ್ರದ್ಧೆಯಿಂದ ಸಂಗೀತದ ಕೆಲಸದಲ್ಲಿ ತೊಡಗಿಕೊಳ್ಳುವುದಷ್ಟನ್ನೇ ಮಾಡಿದರೆ ಸಾಕು ದೇವರು ಅವರನ್ನು ಹರಸುತ್ತಾನೆ ಎಂದು ಎ.ಆರ್ ರೆಹಮಾನ್ ಹೇಳಿದ್ದಾರೆ. ಇದನ್ನೂ ಓದಿ: ಪುತ್ರನನ್ನು ಬಾಲಿವುಡ್ ನಲ್ಲಿ ಲಾಂಚ್ ಮಾಡಲು ನಿರ್ಮಾಪಕ ಆದಿತ್ಯ ಚೋಪ್ರಾಗೆ 20 ಕೋಟಿ ರೂ. ನೀಡಿದ್ದ ರಣ್ ವೀರ್ ಸಿಂಗ್ ತಂದೆ: ಕಮಲ್ ಖಾನ್ ಬಾಂಬ್