ವರುಣ್ ತೇಜ್, ಮಾಜಿ ವಿಶ್ವ ಸುಂದರಿ ಅಭಿನಯದ 'ಆಪರೇಷನ್ ವ್ಯಾಲೆಂಟೈನ್' ಬಿಡುಗಡೆಗೆ ದಿನಾಂಕ ನಿಗದಿ ವರುಣ್ ತೇಜ್ ಮತ್ತು ಮಾನುಷಿ ಚಿಲ್ಲರ್ ಅಭಿನಯದ 'ಆಪರೇಷನ್ ವ್ಯಾಲೆಂಟೈನ್' ಚಿತ್ರ ಡಿಸೆಂಬರ್ 8ರಂದು ತೆರೆಗೆ ಬರಲಿದೆ ಎಂದು ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್ ಪ್ರಕಟಿಸಿದೆ. ಮುಂಬೈ: ವರುಣ್ ತೇಜ್ ಮತ್ತು ಮಾನುಷಿ ಚಿಲ್ಲರ್ ಅಭಿನಯದ 'ಆಪರೇಷನ್ ವ್ಯಾಲೆಂಟೈನ್' ಚಿತ್ರ ಡಿಸೆಂಬರ್ 8ರಂದು ತೆರೆಗೆ ಬರಲಿದೆ ಎಂದು ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್ ಪ್ರಕಟಿಸಿದೆ.ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರವು ತೆಲುಗು-ಹಿಂದಿ ಆ್ಯಕ್ಷನ್ ಡ್ರಾಮಾವಾಗಿದೆ.ಈ ಚಿತ್ರದ ಮೂಲಕ ಜಾಹೀರಾತು ನಿರ್ದೇಶಕ ಮತ್ತು ಛಾಯಾಗ್ರಾಹಕ ಶಕ್ತಿ ಪ್ರತಾಪ್ ಸಿಂಗ್ ಅವರು ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ.'ಬೆದರಿಕೆಯ ಮೂಲಕ ಶಾಂತಿಯನ್ನು ಖಾತರಿಪಡಿಸುವುದು. ಆಪರೇಷನ್ ವ್ಯಾಲೆಂಟೈನ್: ಸ್ಕೈ ಹೈ ರಿವೀಲ್' ಎಂದು ಪೋಸ್ಟ್ ಮಾಡಲಾಗಿದೆ. ಚಿತ್ರವನ್ನು ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್ ಮತ್ತು ರಿನೈಸಾನ್ಸ್ ಪಿಕ್ಚರ್ಸ್‌ನ ಸಂದೀಪ್ ಮುದ್ದ ನಿರ್ಮಿಸಿದ್ದಾರೆ ಮತ್ತು ನಂದಕುಮಾರ್ ಅಬ್ಬಿನೇನಿ ಮತ್ತು ಗಾಡ್ ಬ್ಲೆಸ್ ಎಂಟರ್‌ಟೈನ್‌ಮೆಂಟ್ ಸಹ-ನಿರ್ಮಾಣ ಮಾಡಿದ್ದಾರೆ.