ಭಾರತದಲ್ಲಿ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ: ಅಮೀರ್ ಖಾನ್ ಯಾವುದೇ ಕಾರಣಕ್ಕೂ ಭಾರತ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ, ನಾನು ಹುಟ್ಟಿರುವುದು ಇಲ್ಲೇ, ಹಾಗಾಗಿ ನಾನು ಸಾಯುವುದೂ ಇಲ್ಲೇ, ತಮಗೆ ಯಾವತ್ತೂ ದೇಶ ... ಮುಂಬಯಿ: ಯಾವುದೇ ಕಾರಣಕ್ಕೂ ಭಾರತ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ, ನಾನು ಹುಟ್ಟಿರುವುದು ಇಲ್ಲೇ, ಹಾಗಾಗಿ ನಾನು ಸಾಯುವುದೂ ಇಲ್ಲೇ, ತಮಗೆ ಯಾವತ್ತೂ ದೇಶ ಬಿಟ್ಟು ಹೋಗವ ಬಗ್ಗೆ ಯೋಚಿಸಿಲ್ಲ ಎಂದು ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ.. ಭಾರತದಲ್ಲಿರುವ ವೈವಿಧ್ಯತೆ ಬೇರೆ ಯಾವ ರಾಷ್ಟ್ರದಲ್ಲೂ ಇಲ್ಲ. ನಾನು ಹುಟ್ಟಿರುವುದು ಇಲ್ಲೇ... ಸಾಯುವುದೂ ಇಲ್ಲೇ.. ಎಂದು ಪುನರುಚ್ಛರಿಸಿದರು. 'ಪ್ರತಿ ರಾಷ್ಟ್ರದಲ್ಲೂ ಏರಿಳಿತಗಳು ಇರುತ್ತವೆ. ಇದಕ್ಕೆಲ್ಲಾ ನೇರ ಮತ್ತು ದಿಟ್ಟ ಹೇಳಿಕೆಗಳನ್ನು ಯಾರೊಬ್ಬರೂ ನೀಡುವಂತಾಗಬಾರದು,' ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ನೀಡಿದ ಹೇಳಿಕೆ ನಂತರ ಆಮೀರ್ ಖಾನ್ ಹೇಳಿಕೆ ವಿರುದ್ಧ ಹೊಸ ಟೀಕೆಗಳು ಬರುತ್ತಿವೆ, ಈ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಭಾರತದಲ್ಲಿ ಹಲವು ಭಾಷೆ, ಹಲವು ವೈವಿಧ್ಯತೆ ಇದೆ. ನಾನು ಹೊರರಾಷ್ಟ್ರಗಳಿಗೆ ಹೋದರೆ ಎರಡು ವಾರಕ್ಕಿಂತ ಹೆಚ್ಚಿಗೆ ಇರಲಾರೆ. ನನಗೆ ನನ್ನ ದೇಶವೇ ಶ್ರೇಷ್ಠ ಎಂದು ಅವರು ಹೇಳಿದ್ದಾರೆ.