ನಟಿ ಕೃತಿ ಸನನ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ ನಟ ರಣಬೀರ್ ಕಪೂರ್ ಬಾಲಿವುಡ್ ಹಾರ್ಟ್ ಥ್ರೋಬ್ ರಣಬೀರ್ ಕಪೂರ್ ನಟಿ ಕೃತಿ ಸನನ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ, 'ತು ಜೂಟಿ ಮೈನ್ ಮಕ್ಕರ್' ಸಿನಿಮಾದ ಪ್ರಚಾರದ ಸಮಯದಲ್ಲಿ, ರಣಬೀರ್ ಕಪೂರ್ ಅವರನ್ನು ಮುಂದೆ ಯಾವ ನಟ ಮತ್ತು ನಟಿಯೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ಪ್ರಶ್ನಿಸಲಾಯಿತು. ಮುಂಬೈ: ಬಾಲಿವುಡ್ ಹಾರ್ಟ್ ಥ್ರೋಬ್ ರಣಬೀರ್ ಕಪೂರ್ ನಟಿ ಕೃತಿ ಸನನ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ.ಅವರ ಇತ್ತೀಚಿನ ಚಿತ್ರ, 'ತು ಜೂಟಿ ಮೈನ್ ಮಕ್ಕರ್' ಸಿನಿಮಾದ ಪ್ರಚಾರದ ಸಮಯದಲ್ಲಿ, ರಣಬೀರ್ ಕಪೂರ್ ಅವರನ್ನು ಮುಂದೆ ಯಾವ ನಟ ಮತ್ತು ನಟಿಯೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ಪ್ರಶ್ನಿಸಲಾಯಿತು.ಇದಕ್ಕೆ ಉತ್ತರಿಸಿದ ನಟ, ಕೃತಿ ಸನನ್ ಅವರ ಹೆಸರನ್ನು ಹೇಳಿದ ಅವರು, ನಿಜವಾಗಿಯೂ ಕೆಲಸ ಮಾಡಲು ಬಯಸುವ ನಟಿ ಎಂದು ಹೇಳಿದರು.'ತು ಜೂಟಿ ಮೈನ್ ಮಕ್ಕರ್' ಚಿತ್ರವನ್ನು ಲವ್ ರಂಜನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಒಟ್ಟಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅನುಭವ್ ಸಿಂಗ್ ಬಸ್ಸಿ, ಡಿಂಪಲ್ ಕಪಾಡಿಯಾ ಮತ್ತು ಬೋನಿ ಕಪೂರ್ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.ಇದನ್ನೂ ಓದಿ: ಸಿನಿಮಾ ಮಾಡುವುದು ಮನರಂಜನೆಗಾಗಿ, ಬಾಲಿವುಡ್ ಮಾಡುವುದರಲ್ಲಿ ಅರ್ಥವಿಲ್ಲ: ರಣಬೀರ್ ಕಪೂರ್ಚಿತ್ರವನ್ನು ದೆಹಲಿ, ಮುಂಬೈ, ಸ್ಪೇನ್ ಮತ್ತು ಮಾರಿಷಸ್‌ನಲ್ಲಿ ಚಿತ್ರೀಕರಿಸಲಾಗಿದೆ.ಕೃತಿ ಸನನ್ ಅವರು ಪ್ರಭಾಸ್ ಜೊತೆಗಿನ 'ಆದಿಪುರುಷ' ಮತ್ತು ಟೈಗರ್ ಶ್ರಾಫ್ ಜೊತೆಗಿನ 'ಗಣಪತ್' ಸಿನಿಮಾ ಬಿಡುಗಡೆಗಳಿಗೆ ಸಜ್ಜಾಗುತ್ತಿದ್ದಾರೆ. ಆಕೆಯ ಬಳಿ 'ದಿ ಕ್ರ್ಯೂ' ಮತ್ತು ಶಾಹಿದ್ ಕಪೂರ್ ಜೊತೆಗಿನ ಇನ್ನೂ ಹೆಸರಿಡದ ಚಿತ್ರ ಕೂಡ ಇದೆ.