ಮೀನಾಕುಮಾರಿಯಾಗಿ ಕಂಗನಾ ಮೀನಾ ಕುಮಾರಿ ಪಾತ್ರದಲ್ಲಿ ಕಂಗನಾ ರನೌತ್ ಕಾಣಿಸಲಿದ್ದಾರಂತೆ! ಟಾಪ್ ಒನ್ ಸ್ಥಾನಕ್ಕೇರಿದ, ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಕಂಗನಾ ಕೈಯಲ್ಲಿ ಸದ್ಯ ಸಾಕಷ್ಟು ಚಿತ್ರಗಳಿವೆಯಂತೆ. ಅವೆಲ್ಲಾ ಮುಗಿದ ಬಳಿಕ ಅವರು... ಮೀನಾ ಕುಮಾರಿ ಪಾತ್ರದಲ್ಲಿ ಕಂಗನಾ ರನೌತ್ ಕಾಣಿಸಲಿದ್ದಾರಂತೆ! ಟಾಪ್ ಒನ್ ಸ್ಥಾನಕ್ಕೇರಿದ, ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಕಂಗನಾ ಕೈಯಲ್ಲಿ ಸದ್ಯ ಸಾಕಷ್ಟು ಚಿತ್ರಗಳಿವೆಯಂತೆ. ಅವೆಲ್ಲಾ ಮುಗಿದ ಬಳಿಕ ಅವರು `ಮೀನಾ ಕುಮಾರಿ' ಪಾತ್ರಕ್ಕೆ ರಂಗು ಹಚ್ಚಲಿದ್ದಾರಂತೆ. ಬಾಲಿವುಡ್ ಚಿತ್ರ ರಂಗ ಕಂಡ ಖ್ಯಾತ ಅಭಿನೇತ್ರಿ ಮೀನಾ ಕುಮಾರಿ ಅವರ ಕಥೆ ಕೇಳಿದರೆ ಯಾರೇ ಆಗಲಿ ಆ ಪಾತ್ರ ಮಾಡಬೇಕು ಅನ್ನಿಸುತ್ತದೆ. ಬಾಲಿವುಡ್ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಾಗೂ ದುರಂತ ನಾಯಕಿ ಮೀನಾ ಕುಮಾರಿ. ಇದೀಗ ಮೀನಾ ಕುಮಾರಿಯಾಗಲು ಹೊರಟ ಕಂಗನಾ ರನೌತ್ `ಮೀನಾ ಕುಮಾರಿ ಪಾತ್ರಕ್ಕೆ ನನಗೆ ಆಫರ್ ಬಂದಿದೆ. ಖಂಡಿತ ಆ ಪಾತ್ರ ಮಾಡುವ ಭರವಸೆ ಇದೆ. ಅದಕ್ಕೂ ಮುನ್ನ ಈಗಾಗಲೇ ಒಪ್ಪಿಕೊಂಡ ಚಿತ್ರಗಳನ್ನು ಪೂರ್ಣಗೊಳಿಸಬೇಕಾಗಿದೆ. ಹಾಗಾಗಿ 2016ರ ಮಧ್ಯಂತರದ ತನಕ ಮೀನಾಕುಮಾರಿಯಾಗಲು ಸಾಧ್ಯವಿಲ್ಲ' ಎಂದಿದ್ದಾರೆ. ಒಟ್ಟಿನಲ್ಲಿ ಈ ಚಿತ್ರ ಸೆಟ್ಟೇರಬೇಕಾದರೆ 2016ರ ಮಧ್ಯಂತರದ ತನಕ ಕಾಯಲೇಬೇಕು. ಇನ್ನು ಚಿತ್ರೀಕರಣ ಮುಗಿದು ಮೀನಾಕುಮಾರಿ ನೋಡಲು ಅಭಿಮಾನಿಗಳು ಇನ್ನೆಷ್ಟು ದಿನ ಕಾಯಬೇಕೋ?