ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಗೆ ಇಮ್ತಿಯಾಜ್-ಎ-ಜಾಮಿಯಾ ಪ್ರಶಸ್ತಿ ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರಿಗೆ ಭಾನುವಾರ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಅತ್ಯುನ್ನತ ಗೌರವ ಪ್ರಶಸ್ತಿಯಾದ ಇಮ್ತಿಯಾಜ್-ಎ-ಜಾಮಿಯಾ ಪ್ರದಾನ ಮಾಡಲಾಯಿತು. ನವದೆಹಲಿ: ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಅವರಿಗೆ ಭಾನುವಾರ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಅತ್ಯುನ್ನತ ಗೌರವ ಪ್ರಶಸ್ತಿಯಾದ ಇಮ್ತಿಯಾಜ್-ಎ-ಜಾಮಿಯಾ ಪ್ರದಾನ ಮಾಡಲಾಯಿತು.ವಿಶ್ವವಿದ್ಯಾಲಯದ 103ನೇ ಸಂಸ್ಥಾಪನಾ ದಿನದಂದು ಜಾಮಿಯಾ ಕುಲಪತಿ ನಜ್ಮಾ ಅಖ್ತರ್ ಅವರು ಶರ್ಮಿಳಾ ಟ್ಯಾಗೋರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.ಇದನ್ನು ಓದಿ: ವಿವಾಹವಾದ 5 ವರ್ಷ ಬಳಿಕ ವಿಡಿಯೊ ಬಿಡುಗಡೆ ಮಾಡಿದ ರಣವೀರ್-ದೀಪಿಕಾ: ಇಲ್ಲಿದೆ ಸ್ಟಾರ್ ಜೋಡಿಯ ಮದುವೆ ವಿಡಿಯೊ ತುಣುಕುಹಿಂದಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಶರ್ಮಿಳಾ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ."ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಟಿ ಶರ್ಮಿಳಾ ಅವರು, ನಾನು ವಿಶ್ವವಿದ್ಯಾಲಯಕ್ಕೆ ಪ್ರವೇಶಿಸಿದ ಕ್ಷಣದಿಂದ ಇದೊಂದು ಭಾವನಾತ್ಮಕ ಕ್ಷಣ ಆಗಿತ್ತು ... ಜನರು ನನಗೆ ತೋರಿದ ಪ್ರೀತಿಯಿಂದ ನನ್ನ ಹೃದಯ ತುಂಬಿ ಬಂದಿದೆ" ಎಂದು ಹೇಳಿದರು."ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿಯಿಂದ ನಾನು ಗೌರವಿಸಲ್ಪಟ್ಟಿದ್ದಕ್ಕೆ ಕೃತಜ್ಞಳಾಗಿದ್ದೇನೆ" ಎಂದು ಹಿರಿಯ ನಟಿ ತಿಳಿಸಿದ್ದಾರೆ.