ಅತ್ಯಂತ ಅಪಾರ್ಥಕ್ಕೊಳಗಾದ ನಟ ಸಲ್ಮಾನ್ ಖಾನ್! ಒಂದಾದ ನಂತರ ಒಂದು ವಿವಾದಕ್ಕೆ ಗುರಿಯಾಗುವ ಬಾಲಿವುಡ್ ನ 'ಬ್ಯಾಡ್ ಬಾಯ್' ಎನಿಸಿರುವ ಸಲ್ಮಾನ್ ಖಾನ್, ದೇಶದಲ್ಲಿ ಅತ್ಯಂತ ಅಪಾರ್ಥಕ್ಕೊಳಗಾದ ನಟನೂ ಆಗಿದ್ದಾರಂತೆ. ಒಂದಾದ ನಂತರ ಒಂದು ವಿವಾದಕ್ಕೆ ಗುರಿಯಾಗುವ ಬಾಲಿವುಡ್ ನ 'ಬ್ಯಾಡ್ ಬಾಯ್' ಎನಿಸಿರುವ ಸಲ್ಮಾನ್ ಖಾನ್, ದೇಶದಲ್ಲಿ ಅತ್ಯಂತ ಅಪಾರ್ಥಕ್ಕೊಳಗಾದ ನಟನೂ ಆಗಿದ್ದಾರಂತೆ. ಸಲ್ಮಾನ್ ಖಾನ್ ಅವರು ಅಪಾರ್ಥಕ್ಕೊಳಗಾಗಿರುವುದು ಹಾಗೂ ಅವರ ನಿಜವಾದ ವ್ಯಕ್ತಿತ್ವದ ಬಗ್ಗೆ ಹಿರಿಯ ಪತ್ರಕರ್ತ ಜಸಿಮ್ ಖಾನ್ ಪುಸ್ತಕ ಬರೆದಿದ್ದು, ಸಲ್ಮಾನ್ ಖಾನ್ ಅಪಾರ್ಥಕ್ಕೊಳಗಾಗಿರುವುದೇಕೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದಾರೆ. ಬೀಯಿಂಗ್ ಸಲ್ಮಾನ್ ಪುಸ್ತಕದಲ್ಲಿ ಸಲ್ಮಾನ್ ಖಾನ್ ಬೆಳವಣಿಗೆ ಹಾಗೂ ಅವರ ವಯಕ್ತಿಕ ಜೀವನದ ಬಗ್ಗೆ ಓದುಗರಿಗೆ ಹೆಚ್ಚಿನ ಮಾಹತಿ ಸಿಗಲಿದೆ. ಓದುಗರು ಸಲ್ಮಾನ್ ಖಾನ್ ಅಭಿಮಾನಿಗಳಾಗದೇ ಇದ್ದಲ್ಲಿ ಅವರಿಗೆ ಸಲ್ಮಾನ್ ಖಾನ್ ಬಗ್ಗೆ ಮತ್ತಷ್ಟು ಕುತೂಹಲ ಭರಿತ ಮಾಹಿತಿ ಸಿಗಲಿದೆಯಂತೆ. 1988 ರಲ್ಲಿ ಚಿತ್ರರಂಗಕ್ಕೆ ಪರಿಚಯವಾದ ಸಲ್ಮಾನ್ ಖಾನ್ ಸಿನಿಮಾ ಜೀವನವನ್ನು ಪ್ರಾರಂಭಿಸಿದ್ದು 10 ,000 ರೂಗಳ ವೇತನದಿಂದ. ಈಗ ಅವರ ಬಳಿ ಇರುವುದು ಬರೋಬ್ಬರಿ 1 ,280 ಕೋಟಿ ರುಪಾಯಿಯ ಆಸ್ತಿ. ಈ ಪುಸ್ತಕದಲ್ಲಿ ಸಲ್ಮಾನ್ ಅವರು ಪ್ರೀತಿ ಮಾಡಿದ್ದ ಘಟನೆಗಳ ಬಗ್ಗೆಯೂ ಮಾಹಿತಿ ನೀದಲಾಗಿದ್ದು ಲೇಖಕರ ಪ್ರಕಾರ, ಸಲ್ಮಾನ್ ಪ್ರೀತಿಸಿದ್ದ ಯುವತಿಯರು ಸಲ್ಮಾನ್ ಖಾನ್ ಅವರ ಖ್ಯಾತಿಯ ಪ್ರಯೋಜನ ಪಡೆದುಕೊಂಡರು, ಆದರೆ ಸಲ್ಮಾನ್ ಖಾನ್ ಅವರನ್ನು ನಿಜವಾಗಿ ಇಷ್ಟಪಡಲಿಲ್ಲ. ಸಿನಿಮಾ ಬದುಕು ಹಾಗೂ ವಿವಾದಗಳನ್ನು ಹೊರತುಪಡಿಸಿ ಲೇಖಕ ಜಸಿಮ್ ಖಾನ್, ಸಲ್ಮಾನ್ ಖಾನ್ ಅವರು ನಡೆಸುತ್ತಿರುವ ಎನ್ ಜಿ ಒ ಬೀಯಿಂಗ್ ಹ್ಯೂಮನ್ ಬಗ್ಗೆಯೂ ಬರೆದಿದ್ದಾರೆ.