ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ಧವನ್, ನತಾಶಾ ದಲಾಲ್! ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಧವನ್ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಧವನ್ ಮಾಹಿತಿ ಹಂಚಿಕೊಂಡಿದ್ದಾರೆ.ಫ್ಯಾಷನ್ ಡಿಸೈನರ್ ನತಾಶಾರ ಬೇಬಿ ಬಂಪ್ ಫೋಟೋವನ್ನು ಅವರು ಫೋಸ್ಟ್ ಮಾಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಬೇಕು. ನನ್ನ ಕುಟುಂಬ ನನ್ನ ಶಕ್ತಿ" ಎಂದು ಧವನ್ ಬರೆದುಕೊಂಡಿದ್ದಾರೆ. (@)ಧವನ್ ಮತ್ತು ದಲಾಲ್, ಹಲವಾರು ವರ್ಷಗಳ ಡೇಟಿಂಗ್ ನಂತರ ಜನವರಿ 2021 ರಲ್ಲಿ ವಿವಾಹವಾಗಿದ್ದರು.