ನನ್ನ ಮನೆ ಕೋವಿಡ್ 'ಹಾಟ್‌ಸ್ಪಾಟ್' ಅಲ್ಲ: ಕರಣ್ ಜೋಹರ್ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊರೋನಾ ನೆಗೆಟಿವ್ ದೃಢಪಟ್ಟಿದೆ. ಮುಂಬೈ: ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊರೋನಾ ನೆಗಟಿವ್ ದೃಢಪಟ್ಟಿದೆ.ಈ ಬಗ್ಗೆ ಬುಧವಾರ ಇನ್‌ಸ್ಟಾಗ್ರಾಮ್‌ ನಲ್ಲಿ ಮಾಹಿತಿ ನೀಡಿರುವ ಕರಣ್ ಜೋಹರ್, ಇತ್ತೀಚೆಗೆ ತಮ್ಮ ಮನೆಯಲ್ಲಿ ಕೆಲವು ಬಾಲಿವುಡ್ ತಾರೆಯರನ್ನು ಭೇಟಿಯಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಇದನ್ನು ಓದಿ: ಮದುವೆ ಬಳಿಕ ಮೊದಲ ಬಾರಿಗೆ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಾಲಿವುಡ್ ತಾರಾ ಜೋಡಿ!"ನನ್ನ ಕುಟುಂಬ ಮತ್ತು ನಾನು ಎಲ್ಲರೂ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಿದ್ದು, ದೇವರ ದಯೆಯಿಂದ ಎಲ್ಲರಿಗೂ ಕೊರೋನಾ ನೆಗಟಿವ್ ಬಂದಿದೆ. ವಾಸ್ತವವಾಗಿ, ನಾನು ಸುರಕ್ಷಿತವಾಗಿರಲು ಎರಡು ಬಾರಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಎರಡೂ ಬಾರಿಯೂ ನೆಗಟಿವ್ ಬಂದಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಎಂಸಿಯ ಪ್ರಯತ್ನಗಳನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಮ್ಮ ನಗರದ ಸುರಕ್ಷತೆ ಶ್ರಮಿಸುತ್ತಿರುವ ಬಿಎಂಸಿಗೆ ಧನ್ಯವಾದಗಳು" ಎಂದು ಕರಣ್ ಜೋಹರ್ ಹೇಳಿದ್ದಾರೆ.ಇದನ್ನು ಓದಿ: ಪಾರ್ಟಿ ಎಫೆಕ್ಟ್: ಕರೀನಾ, ಅಮೃತಾ ಆರೋರಾ ಬೆನ್ನಲ್ಲೇ ಸೊಹೇಲ್ ಖಾನ್ ಪತ್ನಿ ಸೀಮಾ ಖಾನ್ ಗೂ ಕೋವಿಡ್ ಸೋಂಕು ದೃಢಹೊಸ ರೂಪಾಂತರಿ ಓಮಿಕ್ರಾನ್ ಆತಂಕದ ನಡುವೆಯೂ ಕರಣ್ ಜೋಹರ್ ಅವರು ತಮ್ಮ ಮನೆಯಲ್ಲಿ "ಪಾರ್ಟಿ" ನಡೆಸಿದ್ದಾರೆ ಎಂಬ ಟೀಕೆಗಳ ಹಿನ್ನಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.ನಾನು ಯಾವುದೇ "ಪಾರ್ಟಿ" ಮಾಡಿಲ್ಲ, ಆದರೆ ಎಂಟು ಜನರಿಗೆ "ಆತ್ಮೀಯ ಕೂಟ" ಆಯೋಜಿಸಿದ್ದೆ ಮತ್ತು ಈ ವೇಳೆ ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಿದ್ದೇನೆ ಎಂದು ಕರಣ್ ಜೋಹರ್ ಹೇಳಿದ್ದಾರೆ. ಇತ್ತೀಚೆಗೆ ಕೋವಿಡ್ ಸೋಂಕಿಗೆ ಒಳಗಾದ ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾ ಇಬ್ಬರೂ ಕರಣ್ ಜೋಹರ್ ಮನೆಯಲ್ಲಿ ನಡೆದ ಕೂಟದಲ್ಲಿ ಭಾಗವಹಿಸಿದ್ದರು.ಕೆಲವು ಮಾಧ್ಯಮ ಸದಸ್ಯರಿಗೆ ಹೇಳಲು ಬಯಸುತ್ತೇನೆ, ಎಂಟು ಜನರ ಆತ್ಮೀಯ ಕೂಟವು 'ಪಾರ್ಟಿ' ಅಲ್ಲ ಮತ್ತು ನಾವು ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳನ್ನು ಪಾಲಿಸಿದ್ದೇವೆ. ನನ್ನ ಮನೆ ಖಂಡಿತವಾಗಿಯೂ ಕೋವಿಡ್‌ 'ಹಾಟ್‌ಸ್ಪಾಟ್' ಅಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾವೆಲ್ಲರೂ ಎಲ್ಲಾ ಸಮಯದಲ್ಲೂ ಜವಾಬ್ದಾರಿಯಿಂದ ವರ್ತಿಸಿದ್ದೇವೆ ಮತ್ತು ಮಾಸ್ಕ್ ಗಳನ್ನು ಧರಿಸಿದ್ದೇವೆ. ಯಾರೂ ಈ ಸಾಂಕ್ರಾಮಿಕವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಕರಣ್ ಜೋಹರ್ ಹೇಳಿದ್ದಾರೆ.