ನಟನೆಯತ್ತ ಮೀರಾ ರಜಪೂತ್ ಮೀರಾ ರಜಪೂತ್ ಅನ್ನುವ ಹೆಸರನ್ನು ಎಲ್ಲಿಯೋ ಕೇಳಿದಂತಿದೆ ಅಂದರೆ, ಇನ್ನು ಆಗಾಗ ಕೇಳಬಹುದು. ಈಕೆ ಶಾಹಿದ್ ಕಪೂರನ ಹೆಂಡತಿ, ನವವಧು.... ಮೀರಾ ರಜಪೂತ್ ಅನ್ನುವ ಹೆಸರನ್ನು ಎಲ್ಲಿಯೋ ಕೇಳಿದಂತಿದೆ ಅಂದರೆ, ಇನ್ನು ಆಗಾಗ ಕೇಳಬಹುದು. ಈಕೆ ಶಹೀದ್ ಕಪೂರನ ಹೆಂಡತಿ, ನವವಧು. ಮೊನ್ನೆಯಷ್ಟೇ ಮದುವೆ ಸುದ್ದಿಯಲ್ಲಿ ಓದಿರುತ್ತೀರಿ. ಈಗ ಮತ್ತೆ ಈಕೆಯ ಹೆಸರು ಕೇಳಿಬರಲು ಕಾರಣ, ಈಕೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾಳಂತೆ. ತನ್ನ ಪತ್ನಿಯನ್ನು ಬಾಲಿವುಡ್‍ನ ಗ್ಲಾಮರಸ್ ಅವತಾರದಲ್ಲಿ ನೋಡಲು ಶಾಹಿದ್ ಉತ್ಸುಕನಾಗಿದ್ದಾನೆ. ಆದರೆ ಆಕೆ ಚಿತ್ರದ ಹೀರೋಯಿನ್ ಅಲ್ಲ. ವಿಕ್ರಮಾದಿತ್ಯ ಮೋಟ್ವಾನಿ ಈ ಚಿತ್ರದ ನಿರ್ಮಾಪಕ. ಚಿತ್ರದ ಹೆಸರು `ಎಕೆ ವರ್ಸಸ್ ಎಸ್‍ಕೆ'. ಇದರಲ್ಲೊಂದು ಸಣ್ಣ ರೋಲು ಈಕೆಯದ್ದು. ಅಂದಹಾಗೆ ಚಿತ್ರದ ಹೀರೋ ಬೇರೆ ಯಾರೂ ಅಲ್ಲ, ಈಕೆಯ ಪತಿ ಮಹಾಶಯನೇ!