ಬಾಲಿವುಡ್ ದಂತಕತೆ, ಖ್ಯಾತ ನಿರ್ದೇಶಕ ಬಸು ಚಟರ್ಜಿ ವಿಧಿವಶ ಬಾಲಿವುಡ್ ದಂತಕಥೆ ಖ್ಯಾತ ನಿರ್ದೇಶಕ ಬಸು ಚಟರ್ಜಿ (93ವರ್ಷ) ಗುರುವಾರ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ಶಾಂತವಾಗಿ ಅವರು ತಮ್ಮ ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಮುಂಬಯಿ: ಬಾಲಿವುಡ್ ದಂತಕಥೆ ಖ್ಯಾತ ನಿರ್ದೇಶಕ ಬಸು ಚಟರ್ಜಿ (93ವರ್ಷ) ಗುರುವಾರ ವಿಧಿವಶರಾಗಿದ್ದಾರೆ.ಇಂದು ಬೆಳಗ್ಗೆ ಶಾಂತವಾಗಿ ಅವರು ತಮ್ಮ ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.ರಜನಿಗಂಧ, ಚೋಟಿ ಸಿ ಬಾತ್, ಖಟ್ಟಾ ಮೀಠಾ, ಬಾತೋನ್ ಬಾತೋನ್ ಮೈನ್, ಸೌಕೀನ್ ಸೇರಿದಂತೆ ಹಲವಾರು ಕ್ಲಾಸಿಕ್ ಚಿತ್ರಗಳ ನಿರ್ದೇಶಕರಾಗಿ ಹೆಸರಾಗಿದ್ದವರು ಬಸು ಚಟರ್ಜಿ.ಖ್ಯಾತ ನಿರ್ದೇಶಕ ಬಸು ಚಟರ್ಜಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಐಎಫ್ ಟಿಡಿಎ ಅಧ್ಯಕ್ಷ ಅಶೋಕೆ ಪಂಡಿತ್, ಇಂದು ಮಧ್ಯಾಹ್ನ 2ಗಂಟೆಗೆ ಮುಂಬೈನ ಸಾಂತಾ ಕ್ರೂಝ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.