ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ಶೀಜಾನ್ ಖಾನ್‌ಗೆ ಜಾಮೀನು, 3 ತಿಂಗಳ ಬಳಿಕ ಜೈಲಿನಿಂದ ಹೊರಬಂದ ನಟ ಬಾಲಿವುಡ್ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ಶೀಜಾನ್ ಖಾನ್‌ಗೆ ಕೊನೆಗೂ ಜಾಮೀನು ದೊರೆತಿದ್ದು, ಬರೊಬ್ಬರಿ 3 ತಿಂಗಳ ಬಳಿಕ ನಟ ಜೈಲಿನಿಂದ ಹೊರಗ ಬಂದಿದ್ದಾರೆ. ಮುಂಬೈ: ಬಾಲಿವುಡ್ ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟ ಶೀಜಾನ್ ಖಾನ್‌ಗೆ ಕೊನೆಗೂ ಜಾಮೀನು ದೊರೆತಿದ್ದು, ಬರೊಬ್ಬರಿ 3 ತಿಂಗಳ ಬಳಿಕ ನಟ ಜೈಲಿನಿಂದ ಹೊರಗ ಬಂದಿದ್ದಾರೆ.ಅಲಿಬಾಬಾ ದಸ್ತಾನ್ ಏಕ್ ಕಾಬೂಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಶೀಜಾನ್ ಖಾನ್ ಜೈಲಿನಲ್ಲಿದ್ದರು. ಇದೀಗ ಸುಮಾರು ಮೂರು ತಿಂಗಳ ನಂತರ ಶೀಜನ್ ಗೆ ರಿಲೀಫ್ ಸಿಕ್ಕಿದ್ದು, ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ಶೀಜಾನ್ ಖಾನ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಇದನ್ನೂ ಓದಿ: ನಟಿ ತುನಿಷಾ ತಾಯಿಯೇ ಆಕೆಯ ಕತ್ತು ಹಿಸುಕಲು ಯತ್ನಿಸಿದ್ದರು: ವಕೀಲ ಆರೋಪMaharashtra | ' ../KWRSwIYNtDಹೊರಗೆ ಬಂದ ಕೂಡಲೇ ಶೀಜನ್ ಮೊದಲು ತಂಗಿಯರನ್ನು ತಬ್ಬಿಕೊಂಡ ನಟ ಭಾವುಕರಾದರು. ನಟನ ಕುಟುಂಬ ಸದಸ್ಯರು ಅವರನ್ನು ಬಿಡುಗಡೆ ಮಾಡಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದರು. ಅದರ ಫಲವಾಗಿ ಮಾರ್ಚ್ 4, 2023 ರಂದು ಕೋರ್ಟ್ ಜಾಮೀನು ನೀಡಿತು. ಶಿಜಾನ್ ನನ್ನು ಒಂದು ಲಕ್ಷ ರೂಪಾಯಿ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮುಂಬೈನ ಥಾಣೆ ಕೇಂದ್ರ ಕಾರಾಗೃಹದಿಂದ ಶೀಜಾನ್ ಖಾನ್ ಹೊರಗೆ ಬಂದಿದ್ದಾರೆ.ಇದನ್ನೂ ಓದಿ: ತುನಿಷಾ ಆತ್ಮಹತ್ಯೆ ಪ್ರಕರಣ: ದ್ರೌಪದಿಗೆ ಕೃಷ್ಣ, ಸೀತೆಗೆ ರಾಮ ಬೆನ್ನಿಗೆ ನಿಂತಂತೆ, ನೀವು ನಮಗೆ ಸಹಾಯ ಮಾಡಿ: ಮೋದಿಗೆ ಕಂಗನಾ ಮನವಿಈಗ ಶೀಜನ್ ಹೊರಗೆ ಬಂದಾಗ ನಟನ ಸಹೋದರಿ ಮತ್ತು ಅವರ ಕುಟುಂಬ ಸದಸ್ಯರು ತುಂಬಾ ಸಂತೋಷದಿಂದ ಸ್ವಾಗತಿಸಿದ್ದಾರೆ. ಶೀಜಾನ್ ಖಾನ್ ಅವರು ಮಾಸ್ಕ್ ಧರಿಸಿ ಜೈಲಿನಿಂದ ಹೊರಬಂದರು.