ಬ್ಯೂಟಿ ವಿತೌಟ್ ಬ್ರೈನ್: ಎಡವಟ್ಟು ಮಾಡಿ ಟ್ರೋಲ್ ಆದ ಜಾಹ್ನವಿ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಇದೀಗ ತಾನು ಮಾಡಿದ ಸಣ್ಣ ಮಿಸ್ಟೆಕ್ ನಿಂದ ಭಾರೀ ಟ್ರೋಲ್‍ಗೆ ಒಳಗಾಗಿದ್ದಾರೆ. ಮುಂಬಯಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಇದೀಗ ತಾನು ಮಾಡಿದ ಸಣ್ಣ ಮಿಸ್ಟೆಕ್ ನಿಂದ ಭಾರೀ ಟ್ರೋಲ್‍ಗೆ ಒಳಗಾಗಿದ್ದಾರೆ.ಇತ್ತೀಚೆಗೆ ನಡೆದ `ಕಾಲಿಂಗ್ ಸೆಹಮತ್’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಜಾಹ್ನವಿ ಬಿಡುಗಡೆ ಮಾಡುತ್ತಿರುವ ಪುಸ್ತಕವನ್ನು ಉಲ್ಟಾ ಹಿಡಿದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅಲ್ಲದೆ ಜಾಲತಾಣಿಗರು ಮಿಸ್ಟೆಕ್ ಮಾಡಿದ ಜಾಹ್ನವಿ ಕಾಲೆಳೆದಿದ್ದಾರೆ. ಬ್ಯೂಟಿ ವಿತೌಟ್ ಬ್ರೈನ್ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಇದು ಮನುಷ್ಯ ಮಾಡಿದ ತಪ್ಪಲ್ಲ ಎಂದು ಹೇಳಿದ್ದಾರೆ.# # @ (@) 23, 2019 8:31am