ಬಾಲಿವುಡ್ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಮೆಟ್ಟಿಲಿನಿಂದ ಬಿದ್ದು ಗಾಯ ಬಾಲಿವುಡ್ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಶುಕ್ರವಾರ ಮುಂಜಾನೆ ಕಟ್ಟಡವೊಂದರ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಜುಬಿನ್ ನೌಟಿಯಾಲ್ ಶುಕ್ರವಾರ ಮುಂಜಾನೆ ಕಟ್ಟಡವೊಂದರ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಕಟ್ಟಡವೊಂದರ ಮೆಟ್ಟಿಲಿನಿಂದ ಬಿದ್ದ ನಂತರ ಜುಬಿನ್ ನೌಟಿಯಾಲ್ ಅವರ ಮೊಣಕೈ ಮುರಿದು, ಪಕ್ಕೆಲುಬುಗಳು ಮತ್ತು ತಲೆಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ ಎನ್ನಲಾಗಿದೆ. ಈ ಘಟನೆ ನಂತರ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಬಲಗೈ ಬಳಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಮೊಣಕೈ ಮುರಿತದೊಂದಿಗೆ ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಜುಬಿನ್ ಕಾಣಿಸಿಕೊಂಡರು. ಜುಬಿನ್ ನೌಟಿಯಾಲ್ ರಾತನ್ ಲಂಬಿಯಾನ್, ಲುಟ್ ಗಯೆ, ಹುಮ್ನಾವಾ ಮೇರೆ ಮತ್ತು ತುಜೆ ಕಿತ್ನೆ ಚಾಹ್ನೆ ಲಗೇ ಹಮ್, ಬನಾ ಶರಾಬಿಯಂತಹ ಹಲವಾರು ಬಾಲಿವುಡ್ ಹಿಟ್‌ಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. , & . . : ' ( ) ../gABRe9UP2Z