ಅಕ್ಷಯ್ ಕಮಾರ್, ವಿಕ್ಕಿ ಕೌಶಲ್ ಸೇರಿ ಹಲವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ದೆಹಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ 2019 ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು. ನವದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ 2019 ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ನಟರು ಹಂಚಿಕೊಂಡಿದ್ದಾರೆ. ಉರಿ- ದಿ ಸರ್ಜಿಕಲ್ ಸ್ಟ್ರೈಕ್ ನಟ ವಿಕ್ಕಿ ಕೌಶಲ್ ಮತ್ತು ಅಂದಾಧನ್ ಸಿನಿಮಾ ನಾಯಕ ನಟ ಆಯುಷ್ಮಾನ್ ಖುರಾನಾ ಅವರಿಗೆ ವೆಂಕಯ್ಯ ನಾಯ್ಡು ಅವರು ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಿದರು.ಮಹಾನಟಿ ಸಿನಿಮಾದಲ್ಲಿನ ಅಭಿನಯಕ್ಕೆ ಟಾಲಿವುಡ್ನ ಕೀರ್ತಿ ಸುರೇಶ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ. ಸಾಮಾಜಿಕ ಕಳಕಳಿಯ ಸಿನಿಮಾಗಳ ಮೂಲಕ ಮಿಂಚುತ್ತಿರುವ ಅಕ್ಷಯ್ ಕುಮಾರ್, ಪ್ಯಾಡ್ಮ್ಯಾನ್ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಸುರೇಶ್ ಸಿಕ್ರಿ 'ಬದಾಯಿ ಹೋ' ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸ್ವೀಕರಿಸಿದರು.ಆದರೆ, ಅನಾರೋಗ್ಯದ ಕಾರಣದಿಂದ ವೃತ್ತಿಜೀವನದ ಅತ್ಯುತ್ತಮ ನಟನೆಗಾಗಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಯಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದ ಬಿಗ್ ಬಿ ಅಮಿತಾಬ್ ಬಚ್ಚನ್, ಪ್ರಶಸ್ತಿ ಸ್ವೀಕರಿಸಲು ಹಾಜರಾಗಲಿಲ್ಲ. ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ದೆಹಲಿಗೆ ಪ್ರಯಾಣ ಮಾಡಲು ಆಗುತ್ತಿಲ್ಲ ಪರಿಣಾಮ ರಾಷ್ಟ್ರೀಯ ಪ್ರಶಸ್ತಿಗೆ ಹಾಜರಾಗಲು ಸಾಧ್ಯವಾಗದಿರುವುದು ನಿಜಕ್ಕೂ ದುರದೃಷ್ಟಕರ, ವಿಷಾದನೀಯ ಎಂದು ಟ್ವೀಟ್ ಮಾಡಿದ್ದಾರೆ.66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು ಅತ್ಯುತ್ತಮ ಹಿಂದಿ ಸಿನಿಮಾ: ಅಂದಾಧನ್ ಬೆಸ್ಟ್ ಜನಪ್ಪುರಿಯ ಸಿನಿಮಾ: ಬದಾಯಿ ಹೋ ಅತ್ಯುತ್ತಮ ನಾಯಕ: ಆಯುಷ್ಮಾನ್ ಖುರಾನಾ(ಅಂದಾಧನ್) ಮತ್ತು ವಿಕ್ಕಿ ಕೌಶಲ್ (ಉರಿ) ಅತ್ಯುತ್ತಮ ನಾಯಕಿ: ಕೀರ್ತಿ ಸುರೇಶ್ (ಮಹಾನಟಿ-ತೆಲುಗು) ಅತ್ಯುತ್ತಮ ಪೋಷಕ ನಟ: ಶಿವಾನಂದ್ ಕಿರ್ಕಿರಿ (ಚುಂಬಕ್) ಅತ್ಯುತ್ತಮ ಪೋಷಕ ನಟಿ: ಸುರೇಖಾ ಸಿಕ್ರಿ (ಬದಾಯಿ ಹೋ) ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್ (ಉರಿ- ದಿ ಸರ್ಜಿಕಲ್ ಸ್ಟ್ರೈಕ್) ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಸುಧಾಕರ್ ರೆಡ್ಡಿ ಯಾಕಂಟಿ, ಸಿನಿಮಾ-ನಾಲ್ (ಮರಾಠಿ) ಅತ್ಯುತ್ತಮ ಹಿನ್ನೆಲೆ ಗಾಯಕ: ಅರ್ಜಿತ್ ಸಿಂಗ್(ಪದ್ಮಾವತ್) ಅತ್ಯುತ್ತಮ ಹಿನ್ನೆಲೆ ಗಾಯಕಿ: ಬಿಂದು ಮಾಲಿನಿ ಅತ್ಯುತ್ತಮ ಹಾಡು: ಬಿಂತೆ ದಿಲ್ (ಪದ್ಮಾವತ್) ಅತ್ಯುತ್ತಮ ಸಂಗೀತ ನಿರ್ದೇಶಕ: ಸಂಜಯ್ ಲೀಲಾ ಬನ್ಸಾಲಿ(ಪದ್ಮಾವತ್) ಅತ್ಯುತ್ತಮ ಹಿನ್ನೆಲೆ ಸಂಗೀತ: ಸಸ್ವತ್ ಸಚ್ದೇವ (ಉರಿ) ಅತ್ಯುತ್ತಮ ಧ್ವನಿ ವಿನ್ಯಾಸ: ಬಿಶ್ವದೀಪ್ ದೀಪಕ್(ಉರಿ) ಅತ್ಯುತ್ತಮ ಸಿನಿ ವಿಮರ್ಶಕ: ಬ್ಲೇಯ್ ಜಾನಿ ಮತ್ತು ಅನಂತ್ ವಿಜಯ್ ಅತ್ಯುತ್ತಮ ಸಾಹಿತ್ಯ: ನಾತಿ ಚರಾಮಿ (ಕನ್ನಡ) ಅತ್ಯುತ್ತಮ ಸಿನಿಮಾಸ್ನೇಹಿ ರಾಜ್ಯ: ಉತ್ತರಾಖಂಡ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಕೆಜಿಎಫ್ ಮತ್ತು ಅವೆ ಬೆಸ್ಟ್ ಕೊರಿಯೋಗ್ರಾಫರ್: ಕೃತಿ ಮಹೇಶ್ ಮಧ್ಯ(ಪದ್ಮಾವತ್-ಗೂಮರ್ ಹಾಡು) ಬೆಸ್ಟ್ ಡೈಲಾಗ್ಸ್: ಡೇಟ್(ಬೆಂಗಾಲಿ) ವಿಶೇಷ ಉಲ್ಲೇಖ ಪ್ರಶಸ್ತಿ: ಗ್ರೇಟ್ ಹಂಟರ್-ಸಾಗರ್ ಪುರಾಣಿಕ್ ಅತ್ಯುತ್ತಮ ನಿರೂಪಣೆ: ದ ಸ್ಟೇಷನ್ ಆಫ್ ಕಲರ್ ಅತ್ಯುತ್ತಮ ಧ್ವನಿ: ದೀಪಕ್ ಅಗ್ನಿಹೋತ್ರಿ, ಊರ್ವಿಜಾ ಉಪಾಧ್ಯಾಯ ಅತ್ಯುತ್ತಮ ಸಂಗೀತ ಚಿತ್ರ: ಜ್ಯೋತಿ, ನಿರ್ದೇಶಕ-ಕೇದಾರ್ ದಿವೇಕರ್ ಅತ್ಯುತ್ತಮ ಸಿನಿಮಾಟೋಗ್ರಫಿ: ದ ಸೀಕ್ರೇಟ್ ಲೈಫ್ ಆಫ್ ಫ್ರಾಗ್ಸ್ (ಅಜಯ್ ಬೇಡಿ ಮತ್ತು ವಿಜಯ್ ಬೇಡಿ) ಅತ್ಯುತ್ತಮ ಸಾಮಾಜಿಕ ನ್ಯಾಯ ಚಿತ್ರ: ವೈ ಮೀ (ಹರೀಶ್ ಷಾ) ಅತ್ಯುತ್ತಮ ತನಿಖಾ ಚಿತ್ರ: ಅಮೋಲಿ ಅತ್ಯುತ್ತಮ ಕ್ರೀಡಾ ಚಿತ್ರ: ಸ್ವಿಮ್ಮಿಂಗ್ ಥ್ರೂ ದ ಡಾರ್ಕ್ನೆಸ್ ಅತ್ಯುತ್ತಮ ಶೈಕ್ಷಣಿಕ ಚಿತ್ರ: ಸರಳ ವಿರಳ ಅತ್ಯುತ್ತಮ ಪರಿಸರ ಚಿತ್ರ: ವರ್ಲ್ಡ್ ಮೋಸ್ಟ್ ಫೇಮಸ್ ಟೈಗರ್ ಅತ್ಯುತ್ತಮ ಪ್ರಚಾರ ಚಿತ್ರ: ರಿ ಡಿಸ್ಕವರಿಂಗ್ ಜಾಜಮ್ ಅತ್ಯುತ್ತಮ ಕಲಾ ಮತ್ತು ಸಾಂಸ್ಕೃತಿಕ ಚಿತ್ರ: ಬುಂಕಾರ್ಸ್: ದ ಲಾಸ್ಟ್ ಆಫ್ ದ ವಾರಾಣಸಿ ವೀವರ್ಸ್ ಬೆಸ್ಟ್ ನಾನ್ ಫೀಚರ್ಡ್ ಸಿನಿಮಾ: ಸನ್ ರೈಸ್