5 ವರ್ಷ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್; ಗೌತಮ್ ಗಂಭೀರ್‌ಗೆ ನನ್ನ ಮೇಲೆ ಆಸಕ್ತಿ ಇತ್ತು: ಬಾಲಿವುಡ್ ನಟಿ ಬಾಲಿವುಡ್ ನಟಿ ಪಾಯಲ್ ಘೋಷ್ ಅವರು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರೊಂದಿಗೆ ತಾನು ಐದು ವರ್ಷ ಡೇಟಿಂಗ್ ಮಾಡಿದ್ದೇನೆ. ಆದರೆ, ನಂತರ ಬ್ರೇಕಪ್ ಆಯಿತು ಎಂದು ಹೇಳಿದ್ದಾರೆ. ಬಾಲಿವುಡ್ ನಟಿ ಪಾಯಲ್ ಘೋಷ್ ಅವರು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರೊಂದಿಗೆ ತಾನು ಐದು ವರ್ಷ ಡೇಟಿಂಗ್ ಮಾಡಿದ್ದೇನೆ. ಆದರೆ, ನಂತರ ಬ್ರೇಕಪ್ ಆಯಿತು. ನಂತರ 2011ರ ವಿಶ್ವಕಪ್ ಸ್ಟಾರ್ ಆಟಗಾರ ಗೌತಮ್ ಗಂಭೀರ್ ತಮ್ಮೊಂದಿಗೆ ಡೇಟಿಂಗ್ ಮಾಡಲು ಆಸಕ್ತಿ ಹೊಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ. , , .. , .. …34 ವರ್ಷದ ನಟಿ, ಇರ್ಫಾನ್ ಪಠಾಣ್ ಅವರೊಂದಿಗಿನ ತಮ್ಮ ಬ್ರೇಕಪ್ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದೆ ಮತ್ತು ವರ್ಷಗಳವರೆಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಗಂಭೀರ್ ಅವರು ನನಗೆ ಸತತವಾಗಿ ತನಗೆ ಮಿಸ್ಡ್ ಕಾಲ್‌ಗಳನ್ನು ನೀಡುತ್ತಿದ್ದರು ಮತ್ತು ಪುಣೆಯಲ್ಲಿ ಭೇಟಿಯಾದಾಗ ಗಂಭೀರ್ ಅವರು ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಎಂದಿದ್ದಾರೆ. 'ನಾನು 2011ರಿಂದ ಐದು ವರ್ಷಗಳ ಕಾಲ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡಿದ್ದೇನೆ ಮತ್ತು ನಂತರ ಎಲ್ಲವೂ ಕೊನೆಗೊಂಡಿತು. ಗೌತಮ್ ಗಂಭೀರ್ ಮತ್ತು ಅಕ್ಷಯ್ ಕುಮಾರ್ ನನ್ನ ಹಿಂದೆ ಬಿದ್ದಿದ್ದರು. ಆದರೆ, ನಾನು ಇರ್ಫಾನ್ ಅವರನ್ನು ಮಾತ್ರ ಪ್ರೀತಿಸುತ್ತಿದ್ದೆ. ನಾನು ಅವರನ್ನು ಬಿಟ್ಟು ಬೇರೆ ಯಾರನ್ನೂ ನೋಡಲಿಲ್ಲ. ನಾನು ಇರ್ಫಾನ್‌ಗೆ ಎಲ್ಲದರ ಬಗ್ಗೆಯೂ ಹೇಳುತ್ತಿದ್ದೆ ಮತ್ತು ಗೌತಮ್ ಗಂಬೀರ್ ಅವರಿಂದ ನನಗೆ ಮಿಸ್ಡ್ ಕಾಲ್‌ಗಳು ಬರುತ್ತಿದ್ದದ್ದನ್ನು ತೋರಿಸುತ್ತಿದ್ದೆ. ಇರ್ಫಾನ್‌ಗೆ ಅದು ಚೆನ್ನಾಗಿ ತಿಳಿದಿತ್ತು ಮತ್ತು ಅವರು ನನ್ನ ಫೋನ್ ಕರೆಗಳನ್ನು ಪರಿಶೀಲಿಸುತ್ತಿದ್ದರು' ಎಂದು ಪಾಯಲ್ ತಿಳಿಸಿದ್ದಾರೆ. # # sırf İrfan , İrfan , … …'ನಾನು ಪುಣೆಯಲ್ಲಿ ಅವರನ್ನು ಭೇಟಿಯಾಗಲು ಹೋದಾಗ ಅವರ ಸಹೋದರ ಯೂಸುಫ್ ಪಠಾಣ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರ ಮುಂದೆ ಇರ್ಫಾನ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು. ಅಕ್ಷಯ್ ಕುಮಾರ್ ಅವರು ನನ್ನೊಂದಿಗೆ ಎಂದಿಗೂ ಅನುಚಿತವಾಗಿ ವರ್ತಿಸಿಲ್ಲ. ಅವರು ದೊಡ್ಡ ಸ್ಟಾರ್. ಅದಕ್ಕಾಗಿ ನಾನು ಅವರನ್ನು ಯಾವಾಗಲೂ ಗೌರವಿಸುತ್ತೇನೆ' ಎಂದು ಘೋಷ್ ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಮದುವೆ ಆಗಲು ನಾನ್ ರೆಡಿ ಎಂದ ಬಾಲಿವುಡ್ ನಟಿ ಪಾಯಲ್ ಘೋಷ್!2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ ವೇಳೆ ಮೊಹಮ್ಮದ್ ಶಮಿಯನ್ನು ಮದುವೆಯಾಗಲು ಸಿದ್ಧ ಎಂದು ಹೇಳುವ ಮೂಲಕ ಪಾಯಲ್ ಇತ್ತೀಚೆಗೆ ಸುದ್ದಿಯಲ್ಲಿದ್ದರು.