ದೇಶದ ಅಸಹಿಷ್ಣುತೆ ಚರ್ಚೆ ಬಗ್ಗೆ ಸಲ್ಮಾನ್ ಖಾನ್ ಸಂದೇಶ ದೇಶದಲ್ಲಿ ಅಸಹಿಷ್ಣುತೆ ವಿಚಾರವಾಗಿ ನಡೆಯುತ್ತಿರುವ ಚರ್ಚೆ ನಡುವೆಯೇ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಜನರಿಗೆ ಭಾವೈಕ್ಯತೆ ಪಾಠ ಹೇಳಿದ್ದಾರೆ. ... ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ವಿಚಾರವಾಗಿ ನಡೆಯುತ್ತಿರುವ ಚರ್ಚೆ ನಡುವೆಯೇ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಜನರಿಗೆ ಭಾವೈಕ್ಯತೆ ಪಾಠ ಹೇಳಿದ್ದಾರೆ. ಜನರು ಯಾವ ಧರ್ಮದವರು ಅಥವಾ ಎಲ್ಲಿಂದ ಬಂದವರು ಎಂಬುದನ್ನು ಆಧರಿಸಿ ಅಳೆಯುವುದು ಸರಿಯಲ್ಲ ಎಂದು ಸಲ್ಮಾನ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ. ನಾವೆಲ್ಲಾ ಮನುಷ್ಯರು ಹಾಗಾಗಿ ನಾವೆಲ್ಲಾ ಹೊಂದಿಕೊಂಡು ಬಾಳಬೇಕು ಎಂದು ತಿಳಿಸಿದ್ದಾರೆ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಮನುಷ್ಯರು. ನಮ್ಮ ನಡುವೆ ಪರಸ್ಪರ ಪ್ರೀತಿ ಇರಬೇಕು, ಒಟ್ಟಿಗೆ ಬಾಳಬೇಕು,'ಎಂದಿದ್ದಾರೆ. ಸಲ್ಮಾನ್ ಖಾನ್ ತಮ್ಮ ಚಿತ್ರ ಪ್ರೇಮ್‌ ರತನ್‌ ಧನ್‌ ಪಾಯೋ ಸಿನಿಮಾದ ಪ್ರಚಾರಕ್ಕೆ ನಟಿ ಸೋನಂ ಕಪೂರ್‌ ಜತೆ ದೆಹಲಿಗೆ ಆಗಮಿಸಿದ್ದ ವೇಳೆ ಮಾತುಗಳನ್ನು ಹೇಳಿದ್ದಾರೆ. .