ಸಂಪತ್ತಿನ ತೆರಿಗೆ ಪ್ರಕರಣ: ನಟ ಶಾರುಖ್ ನಿರಾಳ ಸಂಪತ್ತಿನ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್... ನವದೆಹಲಿ: ಸಂಪತ್ತಿನ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಶಾರುಖ್ ಖಾನ್ ನಿರಾಳರಾಗಿದ್ದಾರೆ. ಫ್ಲ್ಯಾಟ್ ಮತ್ತು ಆಭರಣ ಖರೀದಿಗಾಗಿ ಪತ್ನಿ ಗೌರಿಖಾನ್‌ಗೆ ನೀಡಿದ್ದ 2.28 ಕೋಟಿ ಬಡ್ಡಿ ರಹಿತ ಸಾಲವನ್ನು ಒಟ್ಟು ಆದಾಯಕ್ಕೆ ಸೇರ್ಪಡೆ ಮಾಡಬೇಕೆನ್ನುವ ಆದಾಯ ಇಲಾಖೆ ಆದೇಶವನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ತಿರಸ್ಕರಿಸಿದೆ. ಗೌರಿ ಅವರು ಈ ಹಣದಲ್ಲಿ 1.65 ಕೋಟಿಯನ್ನು ದೆಹಲಿಯಲ್ಲಿ ಮನೆ ಖರೀದಿಸಲು ಬಳಸಿದ್ದರು. 63 ಲಕ್ಷದಲ್ಲಿ ಆಭರಣ ಖರೀದಿಸಿದ್ದರು. ಇದನ್ನು ಆದಾಯ ತೆರಿಗೆ ಇಲಾಖೆಯು ಸಂಪತ್ತಿನ ವರ್ಗಾವಣೆಯಾಗಿ ಪರಿಗಣಿಸಿತ್ತು.