ಅಪ್ಪು ಕನಸಿನ ಕೂಸು, ಕೊನೆ ಚಿತ್ರ 'ಗಂಧದ ಗುಡಿ' ಬಿಡುಗಡೆ ದಿನಾಂಕ ಘೋಷಣೆ, ಮೊದಲ ಪುಣ್ಯತಿಥಿಗೆ ಅಭಿಮಾನಿಗಳಿಗೆ ಸ್ಮರಣೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( ) ನಿಧನರಾಗಿ ಬರುವ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ. ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( ) ನಿಧನರಾಗಿ ಬರುವ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತದೆ. ಅವರು ನಿಧನರಾಗುವುದಕ್ಕೆ ಮುನ್ನ ನೈಜವಾಗಿ, ಸಹಜವಾಗಿ ಪ್ರೀತಿಯಿಂದ ಅಭಿನಯಿಸಿದ ಕೊನೆಯ ಚಿತ್ರ ಗಂಧದ ಗುಡಿ ( ). ಕರ್ನಾಟಕದ ವಿಶೇಷತೆ, ಇಲ್ಲಿನ ಅದ್ಭುತಗಳನ್ನು ರಾಜ್ಯದ ಜನತೆಗೆ ತೋರಿಸಬೇಕೆಂದು ಬಹಳ ಪ್ರೀತಿ, ಶ್ರದ್ಧೆಯಿಂದ ಅವರು ಮಾಡಿದ್ದ ಚಿತ್ರದ ಮೇಲೆ ಅಪಾರ ವಿಶ್ವಾಸವನ್ನು ಅಪ್ಪು ಇರಿಸಿಕೊಂಡಿದ್ದರು.ಕಳೆದ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ಗಂಧದ ಗುಡಿ ಚಿತ್ರದ ಟೀಸರ್ ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೈಯಲ್ಲಿ ಬಿಡುಗಡೆ ಮಾಡಿಸಬೇಕೆಂದು ಬಯಸಿದ್ದ ಅಪ್ಪು ನಿಧನ ಹೊಂದುವುದಕ್ಕೆ ಕೆಲವೇ ದಿನಗಳ ಮೊದಲು ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡಿದ್ದರಂತೆ.ಇದನ್ನೂ ಓದಿ: ನಟ ದಿವಂಗತ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ; ಆಗಸ್ಟ್ 5ರಿಂದ ಆರಂಭಪುನೀತ್ ಅವರು ನಿರ್ದೇಶಕ ಅಮೋಘವರ್ಷ ಜೊತೆ ಇದಕ್ಕಾಗಿ ಗಂಧದ ನಾಡಿನ ಕಾಡುಮೇಡು, ಗುಡ್ಡಬೆಟ್ಟಗಳಲ್ಲಿ ಅಲೆದಾಡಿದ್ದರು, ಸುತ್ತಾಡಿದ್ದರು. ಇದೀಗ ಅವರ ಕನಸಿನ ಕೂಸು ಯಾವಾಗ ತೆರೆಗೆ ಬರಲಿದೆ ಎಂದು ಘೋಷಣೆಯಾಗಿದೆ. ಈ ಮೂಲಕ ಅಪ್ಪು ಅಭಿಮಾನಿಗಳಿಗೆ ಖುಷಿಯ ಸುದ್ದಿ ಸಿಕ್ಕಿದೆ. ಗಂಧದ ಗುಡಿ ಚಿತ್ರ ಅಕ್ಟೋಬರ್ 28ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ. ../s3SRaeAZme