'ಅಂಜನಿ ಪುತ್ರ'ನನ್ನು ನೆನೆದ ರಶ್ಮಿಕಾ 'ಕಿರಿಕ್ ಪಾರ್ಟಿ' ಮೂಲಕ ಚಂದನವನಕ್ಕೆ ಕಾಲಿಟ್ಟು ಜನಪ್ರಿಯ ನಟಿಯಾಗಿ ಬಳಿಕ ಕಾಲಿವುಡ್, ಬಾಲಿವುಡ್ ಗೆ ಹೋಗಿ ಅಲ್ಲಿ ಕೂಡ ನಟನೆಯಲ್ಲಿ ಸೈ ಎನಿಸಿಕೊಂಡು ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದು ಆರು ವರ್ಷಗಳೇ ಕಳೆದಿವೆ. ಬೆಂಗಳೂರು: 'ಕಿರಿಕ್ ಪಾರ್ಟಿ' ಮೂಲಕ ಚಂದನವನಕ್ಕೆ ಕಾಲಿಟ್ಟು ಜನಪ್ರಿಯ ನಟಿಯಾಗಿ ಬಳಿಕ ಕಾಲಿವುಡ್, ಬಾಲಿವುಡ್ ಗೆ ಹೋಗಿ ಅಲ್ಲಿ ಕೂಡ ನಟನೆಯಲ್ಲಿ ಸೈ ಎನಿಸಿಕೊಂಡು ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ( ) ಚಿತ್ರರಂಗಕ್ಕೆ ಬಂದು ಆರು ವರ್ಷಗಳೇ ಕಳೆದಿವೆ.2017ರ ಡಿಸೆಂಬರ್ ನಲ್ಲಿ ತೆರೆ ಕಂಡ ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್( ) ಎದುರಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದರು. ಅದನ್ನೀಗ ರಶ್ಮಿಕಾ ನೆನೆದಿದ್ದಾರೆ. ಅಂಜನಿಪುತ್ರನಿಗೆ 5 ವರ್ಷಗಳು ತುಂಬಿದೆ. ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅಂದು ಆಡುತ್ತಿದ್ದ ಮಾತುಕತೆಗಳನ್ನು ಇಂದಿಗೂ ನೆನೆಯುತ್ತೇನೆ. ಆ ಸಮಯದಲ್ಲಿ ನನ್ನ ಮೇಲೆ ನನಗಿಂತ ಅವರಿಗೇ ಹೆಚ್ಚು ವಿಶ್ವಾಸವಿತ್ತು. ಅವರು ಅತ್ಯಂತ ಸಹೃದಯಿ, ನನ್ನ ಹೃದಯದಲ್ಲಿರುವ ಅವರೊಂದಿಗಿನ ಬಂಧವನ್ನು ಬದಲಾಯಿಸಲು ಸಾಧ್ಯವಿಲ್ಲ. ಚಿತ್ರದ ನಿರ್ದೇಶಕ ಹರ್ಷ ಅವರಿಗೆ ಈ ಸಂದರ್ಭದಲ್ಲಿ ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಕನ್ನಡ ಚಿತ್ರದ ಬಗ್ಗೆ ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ.’ #5YearsForAnjaniPutra @ . , . , .