'ಯಾವ ಮೋಹನ ಮುರಳಿ ಕರೆಯಿತು' ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆ; ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಗೆ ಸಿದ್ಧತೆ! 'ಯಾವ ಮೋಹನ ಮುರಳಿ ಕರೆಯಿತು' ಚಿತ್ರತಂಡ ಭಾನುವಾರ ಚಿತ್ರದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದೆ. ಕುತೂಹಲಕಾರಿ ವಿಚಾರವೆಂದರೆ, ಖ್ಯಾತ ಕವಿ ಗೋಪಾಲಕೃಷ್ಣ ಅಡಿಗ ಬರೆದ ಯಾವ ಮೋಹನ ಮುರಳಿ ಕರೆಯಿತು ಹಾಡಿನ ಮೊದಲ ಸಾಲನ್ನೇ ಚಿತ್ರದ ಶೀರ್ಷಿಕೆಯಾಗಿ ಬಳಸಿಕೊಳ್ಳಲಾಗಿದೆ. 'ಯಾವ ಮೋಹನ ಮುರಳಿ ಕರೆಯಿತು' ಚಿತ್ರತಂಡ ಭಾನುವಾರ ಚಿತ್ರದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದೆ. ಕುತೂಹಲಕಾರಿ ವಿಚಾರವೆಂದರೆ, ಖ್ಯಾತ ಕವಿ ಗೋಪಾಲಕೃಷ್ಣ ಅಡಿಗ ಬರೆದ ಯಾವ ಮೋಹನ ಮುರಳಿ ಕರೆಯಿತು ಹಾಡಿನ ಮೊದಲ ಸಾಲನ್ನೇ ಚಿತ್ರದ ಶೀರ್ಷಿಕೆಯಾಗಿ ಬಳಸಿಕೊಳ್ಳಲಾಗಿದೆ. ಶೀರ್ಷಿಕೆ ಗೀತೆಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಅನಿಲ್ ಸಿಜೆ ಸಂಗೀತ ಸಂಯೋಜಿಸಿದ್ದಾರೆ.ಶರಣಪ್ಪ ಗೌರಮ್ಮ ಅವರ ಬೆಂಬಲದೊಂದಿಗೆ 'ಯಾವ ಮೋಹನ ಮುರಳಿ ಕರೆಯಿತು' ಚಿತ್ರಕ್ಕೆ ವಿಶ್ವಾಸ್ ಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕಥೆಯು ಶ್ವಾನ ಮತ್ತು ವಿಕಲ ಚೇತನ ಬಾಲಕಿಯ ಸುತ್ತ ಸುತ್ತುತ್ತದೆ.'ರಾಕಿ ಎಂಬ ಲ್ಯಾಬ್ರಡಾರ್ ಶ್ವಾನವು ಈಗಾಗಲೇ ನಾಲ್ಕೈದು ಚಿತ್ರಗಳಲ್ಲಿ ಕೆಲಸ ಮಾಡಿದೆ ಮತ್ತು ಅದು 'ಯಾವ ಮೋಹನ ಮುರಳಿ ಕರೆಯಿತು' ಚಿತ್ರದಲ್ಲಿ ನಾಯಕನಾಗಿ ನಟಿಸಿದೆ. ಅದು ತರಬೇತಿ ಪಡೆದ ನಾಯಿಯಾಗಿರುವುದರಿಂದ ನನಗೆ ಶೂಟ್ ಮಾಡುವುದು ಸುಲಭವಾಯಿತು. ಅದನ್ನು ಸೆಟ್‌ಗೆ ಕರೆದೊಯ್ಯುವ ಮೊದಲು ನಾವು ಒಂದು ಸಣ್ಣ ಕಾರ್ಯಾಗಾರ ನಡೆಸಿದ್ದೇವೆ ಮತ್ತು ಅದು 23 ದಿನಗಳಿಗಿಂತ ಹೆಚ್ಚು ಕಾಲ ನಮ್ಮೊಂದಿಗಿತ್ತು' ಎಂದು ವಿಶ್ವಾಸ್ ಹೇಳುತ್ತಾರೆ. ಇದನ್ನೂ ಓದಿ: ವಿಕಲಚೇತನ ಬಾಲಕಿ-ಶ್ವಾನದ ನಡುವಿನ ಹೃದಯಸ್ಪರ್ಶಿ ಕಥೆ ಹೇಳಲಿದೆ 'ಯಾವ ಮೋಹನ ಮುರಳಿ ಕರೆಯಿತು'ಜೋಗ್ ಫಾಲ್ಸ್‌ನ ಸುಂದರವಾದ ಸ್ಥಳದಲ್ಲಿ ಮತ್ತು ಸುತ್ತಮುತ್ತ ಚಿತ್ರೀಕರಣ ನಡೆದಿದೆ ಎಂದು ಅವರು ಬಹಿರಂಗಪಡಿಸುತ್ತಾರೆ. ಪರಿಚಿತ ಮುಖವಾಗಿರುವ ವರುಣ್ ರಾಜ್ ಪಟೇಲ್ ಹೊರತುಪಡಿಸಿ, ಚಿತ್ರದ ಉಳಿದ ತಾರಾಗಣವು ಹೆಚ್ಚಾಗಿ ಹೊಸಬರನ್ನೇ ಒಳಗೊಂಡಿದೆ ಎಂದು ಅವರು ಹೇಳಿದರು. ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಪ್ರಕೃತಿ ನಾಯಕಿಯಾಗಿ ನಟಿಸಿದ್ದಾರೆ ಮತ್ತು ಇನ್ನುಳಿದಂತೆ ಮಾಧವ್ ಮತ್ತು ಸ್ವಪನ್ ಶೆಟ್ಟಿಗಾರ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಡಿಸೆಂಬರ್‌ನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದ್ದಾರೆ.