ನಟಿ ಪ್ರಿಯಾಂಕ ಚೋಪ್ರಾ ಸಹೋದರಿ ಮನ್ನಾರ ಕೆನ್ನೆಗೆ ಮುತ್ತಿಟ್ಟ ತೆಲುಗು ನಿರ್ದೇಶಕ: ವಿಡಿಯೋ ವೈರಲ್ ನಿರ್ದೇಶಕರೊಬ್ಬರು ಪ್ರಿಯಾಂಕಾ ಚೋಪ್ರಾ ತಂಗಿ ಮನ್ನಾರಾ ಚೋಪ್ರಾ ಕೆನ್ನೆಗೆ ಮಾಧ್ಯಮಗಳ ಮುಂದೆಯೆ ಮುತ್ತಿಟ್ಟಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿರ್ದೇಶಕರೊಬ್ಬರು ಪ್ರಿಯಾಂಕಾ ಚೋಪ್ರಾ ತಂಗಿ ಮನ್ನಾರಾ ಚೋಪ್ರಾ ಕೆನ್ನೆಗೆ ಮಾಧ್ಯಮಗಳ ಮುಂದೆಯೆ ಮುತ್ತಿಟ್ಟಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಎ.ಎಸ್‌ ರವಿ ನಿದೇರ್ಶಿಸಿರುವ ‘ತಿರಗಬ್ಯಾಡರ ಸಾಮಿ‘ ತೆಲುಗು ಚಿತ್ರದಲ್ಲಿ ನಟ ರಾಜ್ ತರುಣ್‌ಗೆ ನಾಯಕ ನಟಿಯಾಗಿ ಮನ್ನಾರ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಚುಂಬನದ ಘಟನೆ ನಡೆದಿದೆ.ಇದನ್ನೂ ಓದಿ: ಕರಣ್ ಜೋಹರ್ ಕಾರಣಕ್ಕಾಗಿ ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗಿದ್ದು?: ನಟಿ ಕಂಗನಾ ರಣಾವತ್ಕ್ಯಾಮರಾಗಳಿಗೆ ಪೋಸ್‌ ನೀಡುತ್ತಿದ್ದ ಮನ್ನಾರ ಚೋಪ್ರಾ ಅವರಿಗೆ ಏಕಾಏಕಿ ಬಂದು ರವಿ ಚೌಧರಿ ಚುಂಬಿಸಿದರು. ಈ ವೇಳೆ ಮನ್ನಾರ ಒಂದು ಕ್ಷಣ ಆತಂಕಕ್ಕೆ ಒಳಗಾಗಿರುವಂತೆ ವಿಡಿಯೊದ ದೃಶ್ಯಗಳಲ್ಲಿ ಕಂಡುಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವೃತ್ತಿ ಪರಧಿಯ ಎಲ್ಲೇ ಮೀರಬಾರದೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ # . ../DVN5w5J9RQ