ಧೀರೇನ್ ರಾಮ್‌ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಶಿವ 143' ಆಗಸ್ಟ್ 26 ರಂದು ತೆರೆಗೆ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ನಟ ಧೀರೇನ್ ರಾಮ್‌ಕುಮಾರ್ ಹಾಗೂ ಮಾನ್ವಿತಾ ಕಾಮತ್ ಅಭಿನಯದ ಬಹುನಿರೀಕ್ಷಿತ ಚೊಚ್ಚಲ ಚಿತ್ರ 'ಶಿವ 143' ಅಂತಿಮವಾಗಿ ಮಂಗಳವಾರ ಬಿಡುಗಡೆ ದಿನಾಂಕ ಘೋಷಿಸಿದ್ದು, ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 26 ರಂದು ತೆರೆಗೆ ಬರಲಿದೆ. ಬೆಂಗಳೂರು: ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ನಟ ಧೀರೇನ್ ರಾಮ್‌ಕುಮಾರ್ ಹಾಗೂ ಮಾನ್ವಿತಾ ಕಾಮತ್ ಅಭಿನಯದ ಬಹುನಿರೀಕ್ಷಿತ ಚೊಚ್ಚಲ ಚಿತ್ರ 'ಶಿವ 143' ಅಂತಿಮವಾಗಿ ಮಂಗಳವಾರ ಬಿಡುಗಡೆ ದಿನಾಂಕ ಘೋಷಿಸಿದ್ದು, ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 26 ರಂದು ತೆರೆಗೆ ಬರಲಿದೆ. ಧೀರೇನ್ ರಾಜ್‌ಕುಮಾರ್ ಅವರು ಡಾ. ರಾಜ್ ಕುಮಾರ್ ಕುಟುಂಬದಿಂದ ಬರುವ ಮತ್ತೊಬ್ಬ ನಟರಾಗಿದ್ದು, ಅವರ ಚೊಚ್ಚಲ ಚಿತ್ರ ಸಾಹಸ, ಆಕ್ಷನ್ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.ಶಿವ 143 ಚಿತ್ರ ತೆಲುಗು ಹಿಟ್ ಸಿನಿಮಾ, 100 ಚಿತ್ರದ ಛಾಯೆ ಇದೆ ಎಂದು ವರದಿಯಾಗಿದೆ. ತೆಲುಗಿನಲ್ಲಿ ಕಾರ್ತಿಕೇಯ ಮತ್ತು ಪಾಯಲ್ ರಜಪೂತ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು.ಇದನ್ನು ಓದಿ: ಡಾ.ರಾಜ್‌ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ: ಧೀರೆನ್‌ ರಾಜ್ ಕುಮಾರ್ ರ ‘ಶಿವ 143’ ಚಿತ್ರದ ಟ್ರೈಲರ್‌ ಬಿಡುಗಡೆಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಈ ಚಿತ್ರದಲ್ಲಿ ಸಾಧು ಕೋಕಿಲ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.