ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ: ಶಾರೂಖ್‌, ನಯನತಾರ ಸೇರಿದಂತೆ ಪ್ರಶಸ್ತಿ ಪುರಸ್ಕೃತರ ವಿವರ ಮುಂಬೈ ಸಿನಿಮಾ ಲೋಕದಲ್ಲಿ ಪ್ರತಿಷ್ಠಿತ ಎನಿಸಿರುವ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2024 ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮುಂಬಯಿ: ಮುಂಬೈ ಸಿನಿಮಾ ಲೋಕದಲ್ಲಿ ಪ್ರತಿಷ್ಠಿತ ಎನಿಸಿರುವ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2024 ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು 2024 ರ ವಿಜೇತರ ಪಟ್ಟಿ ಹೊರಬಿದ್ದಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಕರೀನಾ ಕಪೂರ್, ಆದಿತ್ಯ ರಾಯ್, ರಾಣಿ ಮುಖರ್ಜಿ, ಆಟ್ಲಿ ಮತ್ತು ನಯನತಾರಾ ಸೇರಿದಂತೆ ಸಾಕಷ್ಟು ಕಲಾವಿದರು ಹಾಜರಿದ್ದರು.ಈ ಸಮಾರಂಭದಲ್ಲಿ ಜವಾನ್ ಚಿತ್ರದ ಅತ್ಯುತ್ತಮ ನಟನೆಗಾಗಿ ಶಾರುಖ್ ಖಾನ್ ಮತ್ತು ನಯನತಾರಾ ಅವರು ದಾದಾಸಾಹೇಬ್ ಅಂತಾರಾಷ್ಟ್ರೀಯ ಫಾಲ್ಕೆ ಪ್ರಶಸ್ತಿ ಪ್ರಶಸ್ತಿ ಪಡೆದರು. ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ- 2024ರ ವಿಜೇತರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.ಉತ್ತಮ ನಟ: ಶಾರುಖ್ ಖಾನ್ (ಜವಾನ್)ಉತ್ತಮ ನಟಿ: ನಯನತಾರಾ (ಜವಾನ್)ಉತ್ತಮ ನಟಿ: ರಾಣಿ ಮುಖರ್ಜಿ (ಮಿಸ್ಟರ್ ಚಟರ್ಜಿ ನಾರ್ವೆ)ಉತ್ತಮ ನಿರ್ದೇಶಕ: ಸಂದೀಪ್ ರೆಡ್ಡಿ ವಂಗಾ (ಅನಿಮಲ್)ಉತ್ತಮ ನಟ (ವಿಮರ್ಶೆ): ವಿಕ್ಕಿ ಕುಶಾಲ್ (ಸ್ಯಾಮ್ ಬಹದೂರ್)ಉತ್ತಮ ಸಂಗೀತ ನಿರ್ದೇಶಕ: ಅನಿರುದ್ಧ ರವಿಚಂದರ್ (ಜವಾನ್)ಉತ್ತಮ ಹಿನ್ನೆಲೆ ಗಾಯಕ: ವರುಣ್ ಜೈನ್ ( ಝರಾ ಹಟ್ಕೆ ಝರಾ ಬಚ್ಕೆ ಸಿನಿಮಾದಿಂದ ತೇರೆ ವಸ್ತೆ)ಉತ್ತಮ ಖಳನಟ: ಬಾಬಿ ಡಿಯೋಲ್ (ಅನಿಮಲ್)ಉತ್ತಮ ನಟಿ (ಕಿರುತೆರೆ): ರೂಪಾಲಿ ಗಂಗೂಲಿ (ಅನುಪಮಾ)ಉತ್ತಮ ನಟ (ಕಿರುತೆರೆ): ನೈಲ್ ಭಟ್ (ಘಮ್ ಹಾಯ್ ಕಿಸಿಕೆ ಪ್ಯಾರ್ ಮೇನ್)ವರ್ಷದ ಟೆಲಿವಿಷನ್ ಸರಣಿ: ಘಮ್ ಹಾಯ್ ಕಿಸಿಕೆ ಪ್ಯಾರ್ ಮೇನ್ಉತ್ತಮ ನಟಿ (ವೆಬ್ ಸರಣಿ): ಕರಿಷ್ಮಾ ತನ್ನಾ (ಸ್ಕೂಪ್)ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಮೌಶುಮಿ ಚಟರ್ಜಿಸಂಗೀತ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಕೆ ಜೆ ಯೇಸುದಾಸ್ಇದೇ ಸಂದರ್ಭದಲ್ಲಿ ನಿರ್ದೇಶಕ ಆಟ್ಲಿ, ನಟ ಶಾಹಿದ್ ಕಪೂರ್ ಮತ್ತು ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಕೂಡ 2023 ರಲ್ಲಿ ತಮ್ಮ ಪ್ರಯತ್ನಗಳಿಗಾಗಿ ಪ್ರಶಸ್ತಿಯನ್ನು ಪಡೆದರು.