ಮಾಜಿ ಪ್ರಿಯಕರನಿಂದ ಚಿತ್ರಹಿಂಸೆ: ಫೋಟೋಗಳ ಮೂಲಕ ನೋವು ತೋಡಿಕೊಂಡ ನಟಿ ಅನಿಕಾ ನಟಿ ಅನಿಕಾ ವಿಜಯ್ ವಿಕ್ರಮನ್ ತನ್ನ ಮಾಜಿ ಪ್ರಿಯಕರನಿಂದ ಎದುರಿಸಿದ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಅನಿಕಾ ವಿಜಯ್ ವಿಕ್ರಮನ್ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಟಿ ಅನಿಕಾ ವಿಜಯ್ ವಿಕ್ರಮನ್ ತನ್ನ ಮಾಜಿ ಪ್ರಿಯಕರನಿಂದ ಎದುರಿಸಿದ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಅನಿಕಾ ವಿಜಯ್ ವಿಕ್ರಮನ್ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನಟಿ ತನ್ನ ದೌರ್ಜನ್ಯದಿಂದ ಕಳೆದುಕೊಂಡಿದ್ದ ಜೀವನವನ್ನು ಮರಳಿ ಪಡೆದಿದ್ದು ನಟನಾ ವೃತ್ತಿಜೀವನಕ್ಕೆ ಮರಳಿರುವುದಾಗಿ ಹೇಳಿದ್ದಾರೆ.ಇದನ್ನೂ ಓದಿ: ಯಶ್ 'ರಾಖಿ ಭಾಯ್' ಪಾತ್ರವನ್ನು ಕೆಟ್ಟ ಪದದಿಂದ ಟೀಕಿಸಿದ ತೆಲುಗು ನಿರ್ದೇಶಕ; ಅಭಿಮಾನಿಗಳ ಆಕ್ರೋಶ!ಇನ್‌ಸ್ಟಾಗ್ರಾಮ್‌ನಲ್ಲಿ ಅನಿಕಾ ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಆಕೆಯ ಮುಖವು ತೀವ್ರವಾಗಿ ಗಾಯಗೊಂಡಿದೆ. ಕಣ್ಣಿನ ಸುತ್ತ ರಕ್ತ ಹೆಪ್ಪುಗಟ್ಟಿರುವುದು ಪೋಟೋಗಳಲ್ಲಿ ಸ್ಪಷ್ಟವಾಗಿದೆ. ಈ ಘಟನೆಗಳನ್ನು ಮರೆಯೋಣ ಎಂದರೂ ನನಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ಮತ್ತು ನನ್ನ ಕುಟುಂಬವನ್ನು ನಿರಂತರವಾಗಿ ಮಾನಹಾನಿ ಮಾಡಲಾಗುತ್ತಿದೆ. ಕೊನೆಯ ಚಿತ್ರವು ನನ್ನ ಮಾಜಿ ಗೆಳೆಯ ನನ್ನ ಮೇಲಿನ ಹಲ್ಲೆಯದ್ದಾಗಿದೆ ಎಂದು ಬರೆದುಕೊಂಡಿದ್ದಾರೆ. (@)ತನ್ನ ಮುಖ ಮತ್ತು ಎದೆಯ ಮೇಲೆ ಮೂಗೇಟುಗಳಿದ್ದಲ್ಲದೆ, ತನ್ನ ಗೆಳೆಯನಿಂದ ತೀವ್ರ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ಎದುರಿಸಬೇಕಾಯಿತು ಎಂದು ಅನಿಕಾ ಹೇಳುತ್ತಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವುದಾಗಿಯೂ ನಟ ತಿಳಿಸಿದ್ದಾರೆ. ಏತನ್ಮಧ್ಯೆ, ತನ್ನ ಮಾಜಿ ಗೆಳೆಯ ತಲೆಮರೆಸಿಕೊಂಡಿದ್ದಾನೆ.