'ಭೋಲ ಶಂಕರ್' ನಲ್ಲಿ ಮೆಗಾ ಸ್ಟಾರ್ ಜೊತೆ ಮಿಲ್ಕಿ ಬ್ಯೂಟಿ ತಮನ್ನಾ! ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಭೋಲ ಶಂಕರ್ ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ಅಭಿನಯಿಸುತ್ತಿದ್ದಾರೆ. ಮುಂಬಯಿ: ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಭೋಲ ಶಂಕರ್ ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ಅಭಿನಯಿಸುತ್ತಿದ್ದಾರೆ.ಈ ಸಂಬಂಧ ತಮ್ಮ ಟ್ವಿಟ್ಟರ್ ನಲ್ಲಿ ತಮನ್ನಾ ವಿಷಯ ಹಂಚಿಕೊಂಡಿದ್ದಾರೆ. ಚಿರಂಜೀವಿ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ದೊರೆತಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಚಿರಂಜೀವಿ 66ನೇ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ: ಭೋಲಾ ಶಂಕರ್ ನಲ್ಲಿ ಮೆಗಾಸ್ಟಾರ್!ಈ ಹಿಂದೆ 2019 ರಲ್ಲಿ ತೆರೆಕಂಡಿದ್ದ ಸೈರಾ ನರಸಿಂಹ ರೆಡ್ಡಿ ಐತಿಹಾಸಿಕ ಸಿನಿಮಾದಲ್ಲಿ ನಟಿಸಿದ್ದರು. ಭೋಲ ಶಂಕರ್ ಸಿನಿಮಾವನ್ನು ಮೆಹರ್ ರಮೇಸ್ ನಿರ್ದೇಶಿಸುತ್ತಿದ್ದಾರೆ.