ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್‌ ರೈಡಿಂಗ್‌' ಚಿತ್ರ ನವೆಂಬರ್ 25ಕ್ಕೆ ಬಿಡುಗಡೆ ಗೋಲ್ಡನ್ ಸ್ಟಾರ್ ಗಣೇಶ್‌ ಅಭಿನಯದ ‘ತ್ರಿಬಲ್‌ ರೈಡಿಂಗ್‌’ ಚಿತ್ರ ಇದೇ ನ.25ರಂದು ಬಿಡುಗಡೆಗೆ ಸಜ್ಜಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್‌ ಅಭಿನಯದ ‘ತ್ರಿಬಲ್‌ ರೈಡಿಂಗ್‌’ ಚಿತ್ರ ಇದೇ ನ.25ರಂದು ಬಿಡುಗಡೆಗೆ ಸಜ್ಜಾಗಿದೆ.ಮಹೇಶ್‌ ಗೌಡ ನಿರ್ದೇಶನ, ವೈ ಎಂ ರಾಮ್‌ಗೋಪಾಲ್‌ ನಿರ್ಮಾಣದ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.‘ಗಾಳಿಪಟ 2’ ಚಿತ್ರದ ಯಶಸ್ಸಿನಲ್ಲಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರಿಗೆ ‘ತ್ರಿಬಲ್‌ ರೈಡಿಂಗ್‌’ ಮತ್ತೊಂದು ಗೆಲವು ತಂದುಕೊಡುವ ಭರವಸೆ ಮೂಡಿಸಿದೆ.ಇದನ್ನೂ ಓದಿ: ಮೂವರು ನಾಯಕಿಯರೊಂದಿಗೆ ಗೋಲ್ಡನ್ ಸ್ಟಾರ್ 'ತ್ರಿಬಲ್ ರೈಡಿಂಗ್‌'; ಯಟ್ಟಾ ಯಟ್ಟಾ ಹಾಡಿಗೆ ಭರ್ಜರಿ ರೆಸ್ಪಾನ್ಸ್ಆಡಿಯೋ ಬಿಡುಗಡೆ ಕೂಡ ಸಜ್ಜಾಗಿರುವ ಈ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಅದಿತಿಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್‌ ಅವರು ನಾಯಕಿಯರಾಗಿ ನಟಿಸಿದ್ದಾರೆ.ರಾಮಗೋಪಾಲ್ ಅವರು ಬಂಡವಾಳ ಹೂಡಿರುವ 'ತ್ರಿಬಲ್ ರೈಡಿಂಗ್' ಚಿತ್ರಕ್ಕೆ ಸಾಯಿ ಕಾರ್ತೀಕ್ ಸಂಗೀತ ಸಂಯೋಜನೆ ಮತ್ತು ಜೈ ಆನಂದ್ ಛಾಯಾಗ್ರಹಣವಿದೆ.