'ನೀವು ಒಂದ್ ಸಲ ಹೊಗಳಿದ್ರೆ...' ರಜನಿಕಾಂತ್ ಭೇಟಿ ಬಳಿಕ ರಿಷಬ್ ಶೆಟ್ಟಿ ಹೇಳಿದ್ದೇನು? ರಿಷಬ್ ಶೆಟ್ಟಿ ನಿರ್ಮಾಣದ ಕನ್ನಡದ ಸಿನಿಮಾ ‘ಕಾಂತಾರ’ವನ್ನು ನೋಡಿ ಸೂಪರ್ ಸ್ಟಾರ್ ರಜನಿಕಾಂತ್‌ ಮನಸಾರೆ ಹೊಗಳಿದ್ದರು. ಈ ಹಿನ್ನೆಲೆಯಲ್ಲಿ ನಟ ರಿಷಬ್‌ ಶೆಟ್ಟಿ ಅವರು ಶುಕ್ರವಾರ ಚೆನ್ನೈನ ಅವರ ನಿವಾಸದಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ. ರಿಷಬ್ ಶೆಟ್ಟಿ ನಿರ್ಮಾಣದ ಕನ್ನಡದ ಸಿನಿಮಾ ‘ಕಾಂತಾರ’ವನ್ನು ನೋಡಿ ಸೂಪರ್ ಸ್ಟಾರ್ ರಜನಿಕಾಂತ್‌ ಮನಸಾರೆ ಹೊಗಳಿದ್ದರು. ಈ ಹಿನ್ನೆಲೆಯಲ್ಲಿ ನಟ ರಿಷಬ್‌ ಶೆಟ್ಟಿ ಅವರು ಶುಕ್ರವಾರ ಚೆನ್ನೈನ ಅವರ ನಿವಾಸದಲ್ಲಿ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.ಇತ್ತೀಚೆಗಷ್ಟೆ ಸಿನಿಮಾ ನೋಡಿದ್ದ ರಜನಿಕಾಂತ್‌ ಅವರು ಚಿತ್ರದ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದ್ದರು. ತಿಳಿದಿರುವುದಕ್ಕಿಂತ ತಿಳಿಯದಿರುವುದು ಬಹಳಷ್ಟಿರುತ್ತವೆ. ಹೊಂಬಾಳೆ ಫಿಲ್ಮ್ಸ್, ರಿಷಬ್‌ ಶೆಟ್ಟಿ ಉತ್ತಮ ಸಿನಿಮಾ ನೀಡಿದ್ದಾರೆ. ರಿಷಬ್‌ ನಟನೆ, ನಿರ್ದೆಶನ, ಬರವಣಿಗೆಗೆ ಹ್ಯಾಟ್ಸಪ್‌. ಮೈನವಿರೇಳಿಸಿರುವ ಅನುಭವ ನೀಡಿದೆ. ತಂಡಕ್ಕೆ ಶುಭಾಶಯಗಳು’ ಎಂದಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ರಿಷಬ್‌ ಶೆಟ್ಟಿ, ‘ಸರ್‌ ನೀವು ಭಾರತದ ದೊಡ್ಡ ಸೂಪರ್‌ಸ್ಟಾರ್. ಬಾಲ್ಯದಿಂದಲೂ ನಾನು ನಿಮ್ಮ ಅಭಿಮಾನಿ. ನಿಮ್ಮ ಮೆಚ್ಚುಗೆಯಿಂದ ನನ್ನ ಕನಸು ನನಸಾದಂತಾಗಿದೆ. ಸ್ಥಳೀಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ನೀವು ನನಗೆ ಪ್ರೇರಣೆಯಾಗಿದ್ದೀರಿ’ ಎಂದು ಟ್ವೀಟ್‌ ಮಾಡಿದ್ದರು.ಇದನ್ನೂ ಓದಿ: 'ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು', ಇದನ್ನು ಸಿನಿಮಾದಲ್ಲಿ ರಿಷಬ್ ಶೆಟ್ಟಿಗಿಂತ ಯಾರೂ ಚೆನ್ನಾಗಿ ಹೇಳಲು ಸಾಧ್ಯವಿಲ್ಲ: ರಜನಿಕಾಂತ್ಇದರ ಬೆನ್ನಿಗೇ, ರಿಷಬ್‌ ಶೆಟ್ಟಿ ಚೆನ್ನೈನಲ್ಲಿ ರಜನಿಕಾಂತ್‌ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೀವು ಒಂದ್ ಸಲ ಹೊಗಳಿದ್ರೆ... ನೂರು ಸಲ ಹೊಗಳ್ದ೦ಗೆ ನಮಗೆ. ಧನ್ಯವಾದಗಳು ರಜನಿಕಾಂತ್‌ ಸರ್‌. ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ’ ಎಂದು ರಿಷಬ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.ನೀವು ಒಂದ್ ಸಲ ಹೊಗಳಿದ್ರೆ.. ನೂರು ಸಲ ಹೊಗಳ್ದ೦ಗೆ ನಮಗೆ.ಧನ್ಯವಾದಗಳು @ ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದ್ದಕ್ಕೆ ನಾವು ಸದಾ ಆಭಾರಿ# @ @ @gowda_sapthami @Karthik1423 ../MNPSDR5jx8