ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾದ 'ಟ್ರೋಲಾಗುತ್ತೆ' ಹಾಡು ರಿಲೀಸ್: ಗಮನಸೆಳೆದ ರೀಷ್ಮಾ ನಾಣಯ್ಯ ಉಪೇಂದ್ರ ಅವರ ಚಿತ್ರದ ಟ್ರೋಲಾಗತ್ತೆ ಹಾಡನ್ನು ಇತ್ತೀಚೆಗೆ ಲಹರಿ ಮ್ಯೂಸಿಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡು ಹಲವಾರು ಕಾರಣಗಳಿಂದ ತೀವ್ರ ಸಂಚಲನ ಮೂಡಿಸಿದೆ. ಉಪೇಂದ್ರ ಅವರ ಚಿತ್ರದ ಟ್ರೋಲಾಗತ್ತೆ ಹಾಡನ್ನು ಇತ್ತೀಚೆಗೆ ಲಹರಿ ಮ್ಯೂಸಿಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾದ ಈ ಹಾಡು ಹಲವಾರು ಕಾರಣಗಳಿಂದ ತೀವ್ರ ಸಂಚಲನ ಮೂಡಿಸಿದೆ. ಈ ಹಾಡು ಕರಿಮಣಿ ಮಾಲಿಕ ನೀನಲ್ಲ, ನಾನು ನಂದಿನಿ, ಬೆಳ್ಳುಳ್ಳಿ ಕಬಾಬ್ ಮುಂತಾದ ಟ್ರೆಂಡಿಂಗ್ ರೀಲ್‌ಗಳು ಮತ್ತು ಮೀಮ್‌ಗಳಿಂದ ಸಂಯೋಜಿಸಲಾಗಿದ್ದು, ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಹಾಡಿನಲ್ಲಿ ರೀಷ್ಮಾ ನಾಣಯ್ಯ ಸಖತ್ ನೃತ್ಯದ ಮೂಲಕ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮತ್ತು ಗೀತರಚನೆಕಾರ ಅನೂಪ್ ಭಂಡಾರಿ ಹಿಂದಿ ಹಾಡಿನ ಸಾಹಿತ್ಯ ಬರೆದಿದ್ದು, ಹಿಂದಿ ಆವೃತ್ತಿಯು ಉತ್ತರ ಭಾರತದಲ್ಲಿ ಸದ್ಯ ಟ್ರೆಂಡ್ ಆಗಿರುವ ಪ್ರಸಿದ್ಧ ವಿಚಾರಗಳನ್ನು ಒಳಗೊಂಡಿದೆ. ರಾಂಬಾಬು ಗೋಸಾಲ ಅವರು ತೆಲುಗು ಆವೃತ್ತಿಯನ್ನು ಬರೆದಿದ್ದಾರೆ ಮತ್ತು ವೆ ಮದನ್ ಕುಮಾರ್ ತಮಿಳಿನಲ್ಲಿ ಸಾಹಿತ್ಯವನ್ನು ಬರೆದಿದ್ದಾರೆ.ಕನ್ನಡ ಅವತರಣಿಕೆಗೆ ಐಶ್ವರ್ಯಾ ರಂಗರಾಜನ್, ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ ಮತ್ತು ಅನೂಪ್ ಭಂಡಾರಿ ಧ್ವನಿ ನೀಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ನರೇಶ್ ಕುಮಾರ್ ಎಚ್‌ಎನ್ ಸಾಹಿತ್ಯ ಬರೆದಿದ್ದಾರೆ.ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಈ ಹಾಡು ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ಉಪೇಂದ್ರ ನಾಯಕನಾಗಿ ನಟಿಸಿರುವ ಯುಐ ಚಿತ್ರವನ್ನು ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಜಿ ಮನೋಹರನ್ ಮತ್ತು ಶ್ರೀಕಾಂತ್ ಕೆಪಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಎಚ್‌ಸಿ ವೇಣುಗೋಪಾಲ್ ಅವರ ಛಾಯಾಗ್ರಹಣವಿದೆ.