'ಶ್ರೀ ರಾಮ್ ಜೈ ಹನುಮಾನ್' ಬಹು ಭಾಷೆಗಳಲ್ಲಿ ತಯಾರು! ಗಣೇಶ್ ಅಭಿನಯದ ಶ್ರಾವಣಿ ಸುಬ್ರಹ್ಮಣ್ಯ, ಜಗ್ಗೇಶ್ ಮತ್ತು ಧನಂಜಯ್ ಜೊತೆ ತೋತಾಪುರಿ 1 ಮತ್ತು 2 ಚಿತ್ರಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸುರೇಶ್ ಕೆ.ಎ, ಬಹುಭಾಷಾ ಪ್ರಾಜೆಕ್ಟ್ ಗೆ ತಮ್ಮ ವ್ಯಾಪ್ತಿ ವಿಸ್ತರಿಸಲು ಸಜ್ಜಾಗುತ್ತಿದ್ದಾರೆ. ಗಣೇಶ್ ಅಭಿನಯದ ಶ್ರಾವಣಿ ಸುಬ್ರಹ್ಮಣ್ಯ, ಜಗ್ಗೇಶ್ ಮತ್ತು ಧನಂಜಯ್ ಜೊತೆ ತೋತಾಪುರಿ 1 ಮತ್ತು 2 ಚಿತ್ರಗಳಿಗೆ ಹೆಸರುವಾಸಿಯಾದ ನಿರ್ಮಾಪಕ ಸುರೇಶ್ ಕೆ.ಎ, ಬಹುಭಾಷಾ ಪ್ರಾಜೆಕ್ಟ್ ಗೆ ತಮ್ಮ ವ್ಯಾಪ್ತಿ ವಿಸ್ತರಿಸಲು ಸಜ್ಜಾಗುತ್ತಿದ್ದಾರೆ.ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ದಿನದಂದು, ನಿರ್ಮಾಪಕರು, ತಮ್ಮ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ, ಶ್ರೀ ರಾಮ್, ಜೈ ಹನುಮಾನ್ ಎಂಬ ಶೀರ್ಷಿಕೆಯ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ.ಅವದೂತ್ ನಿರ್ದೇಶನದ ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗಲಿದೆ. "ರಾಮಾಯಣದ ಅನ್ಟೋಲ್ಡ್ ಎಪಿಕ್" ಎಂಬ ಅಡಿಬರಹದೊಂದಿಗೆ, ರಾಮಾಯಣದ ಅಂಶಗಳನ್ನು ಪರಿಶೀಲಿಸುವ ಗುರಿಯನ್ನು ಸೂಚಿಸುತ್ತದೆ, ಇದು ಮಹಾಕಾವ್ಯದ ಕಥೆಯ ಮೇಲೆ ಅನನ್ಯ ದೃಷ್ಟಿಕೋನವನ್ನು ನೀಡುತ್ತದೆ ಎಂದು ಹೇಳಲಾಗಿದೆ.ಇದನ್ನೂ ಓದು: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವೇ ತನ್ನ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ ನಟ ಧ್ರುವ ಸರ್ಜಾಪರ್ವತಗಳು, ಬೆಂಕಿ, ನೀರು ಮತ್ತು ರಾಮ್ ಮತ್ತು ಹನುಮಂತನ ದೈವಿಕ ಜೋಡಿಯಂತಹ ಅಂಶಗಳನ್ನು ಒಳಗೊಂಡಿರುವ ಪೋಸ್ಟರ್, ಈ ಟೈಮ್ಲೆಸ್ ನಿರೂಪಣೆಗೆ ಜೀವ ತುಂಬುವ ಆಕ್ಷನ್-ಪ್ಯಾಕ್ಡ್ ಚಲನಚಿತ್ರವಾಗಿದೆ ಎಂದು ನಿರೀಕ್ಷಿಸಲಾಗಿದೆ.ಪ್ರೊಡಕ್ಷನ್ ಹೌಸ್ ವಿವಿಧ ಭಾಷೆಗಳ ನಟರು ಮತ್ತು ಕಲಾವಿದರನ್ನು ಸೇರಿಸಲು ಯೋಜಿಸಿದೆ. ಪ್ರಸ್ತುತ ಸ್ಟೋರಿ ಬೋರ್ಡಿಂಗ್ ಮತ್ತು ವಿಎಫ್‌ಎಕ್ಸ್ ಹಂತಗಳಲ್ಲದೆ. ಶ್ರೀ ರಾಮ್, ಜೈ ಹನುಮಾನ್, ಮುಂದಿನ ದಿನಗಳಲ್ಲಿ ಕಥಾಹಂದರದ ಹೆಚ್ಚಿನ ವಿವರಗಳನ್ನು ಬಿಚ್ಚಿಡಲು ತಯಾರಕರು ಪ್ಲಾನ್ ಮಾಡಿದೆ.