ಅಶ್ವಿನಿ ಪುನೀತ್ ರಾಜ್ ಕುಮಾರ್ ಕುರಿತು ಕೀಳುಮಟ್ಟದ ಪೋಸ್ಟ್: ದರ್ಶನ್ ಅಭಿಮಾನಿಗಳ ವಿರುದ್ಧ ಅಪ್ಪು ಫ್ಯಾನ್ಸ್ ದೂರು! 2024 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ವಿಚಾರ ಮುಂದಿಟ್ಟುಕೊಂಡು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ( ) ಕುರಿತು ಕೀಳುಮಟ್ಟದ ಪೋಸ್ಟ್ ಮಾಡಿದ ಹಿನ್ನಲೆಯಲ್ಲಿ ನಟ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿರುವ ಕಿಡಿಗೇಡಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರು: 2024 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ವಿಚಾರ ಮುಂದಿಟ್ಟುಕೊಂಡು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ( )ಕುರಿತು ಕೀಳುಮಟ್ಟದ ಪೋಸ್ಟ್ ಮಾಡಿದ ಹಿನ್ನಲೆಯಲ್ಲಿ ನಟ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿರುವ ಕಿಡಿಗೇಡಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಹೌದು.. ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ) ತಂಡದ ಕಳಪೆ ಪ್ರದರ್ಶನಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣ.. ಅವರನ್ನು ಆರ್ ಸಿಬಿ ಈವೆಂಟ್ ಗೆ ಕರೆಸಬಾರದಿತ್ತು ಎನ್ನುವ ಕೀಳುಮಟ್ಟದ ಪೋಸ್ಟ್ ವೊಂದು ಇದೀಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ಸ್ ವಾರ್ ಗೆ ದಾರಿಮಾಡಿಕೊಟ್ಟಿದ್ದು, ನಟ ದರ್ಶನ್ ( ) ಅಭಿಮಾನಿಗಳ ವಿರುದ್ಧ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.ಈ ಬಾರಿ ಆರ್‌ಸಿಬಿ ತಂಡ ನಾಲ್ಕು ಪಂದ್ಯಗಳಲ್ಲಿ ಮೂರು ಸೋತು, ಒಂದು ಮ್ಯಾಚ್ ಗೆದ್ದಿದೆ. ಇದರ ಬೆನ್ನಲ್ಲೇ ದರ್ಶನ್‌ ( ) ಕೆಲ ಫ್ಯಾನ್ಸ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ( ) ಅವರನ್ನು ದೂರುತ್ತಿದ್ದಾರೆ. ‘ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್ಸಿಬಿ ಸೋಲುತ್ತಿದೆ’ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಕೀಳು ಮಟ್ಟದ ಟ್ವೀಟ್ ಮಾಡಿದೆ. ಆರ್ಸಿಬಿ ಸೋಲುವುದಕ್ಕೂ, ಅಶ್ವಿನಿ ಪುನೀತ್ ರಾಜ್ಕುಮಾರ್ಗೂ ಏನು ಸಂಬಂಧ? ಎಂದು ಅಪ್ಪು ಫ್ಯಾನ್ಸ್‌ ಆಕ್ರೋಶ ಹೊರಹಾಕುತ್ತಿದ್ದು, ಇದೀಗ ಆ ಪೋಸ್ಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.ಹೌದು ನೋಡಿ ಸಾರ್ ../oYHYzSy1WIಆರ್ಸಿಬಿ ಅನ್ಬಾಕ್ಸಿಂಗ್ ಇವೆಂಟ್ಗೆ ಅಶ್ವಿನಿ ಅವರು ಕೂಡ ತೆರಳಿದ್ದರು. ‘ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್ಸಿಬಿ ಸೋಲುತ್ತಿದೆ’ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಮೂಲಕ ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ನಿಂದ ಪುನೀತ್ ರಾಜಕುಮಾರ್ ಫ್ಯಾನ್ಸ್ ಸದ್ಯ ಕೋಪಗೊಂಡಿದ್ದಾರೆ. ಕಾನೂನು ಕ್ರಮಕ್ಕೆ ಅಪ್ಪು ಅಭಿಮಾನಿಗಳು ಮುಂದಾಗಿದ್ದಾರೆ. ಈಗಾಗಲೇ ಟ್ವಿಟರ್‌ನಲ್ಲಿ ಈ ಬಗೆಗಿನ ಸ್ಕ್ರೀನ್‌ ಶಾಟ್‌ಗಳು ವೈರಲ್‌ ಆಗುತ್ತಿದೆ.ನಟ ದರ್ಶನ್ ಅಸಮಾಧಾನಇನ್ನು ಅಭಿಮಾನಿಗಳ ಈ ಕಿಡಿಗೇಡಿತನಕ್ಕೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ತುತ್ತಾಗಿರುವ ನಟ ದರ್ಶನ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ದರ್ಶನ್ ಅವರ ಅಭಿಮಾನಿಯೊಬ್ಬರು ಮಾಹಿತಿ ನೀಡಿದ್ದು, ಇಂತಹ ಕೀಳುಮಟ್ಟದ ಬೆಳವಣಿಗೆಯನ್ನು ನಟ ದರ್ಶನ್ ಸಹಿಸಲ್ಲ ಎಂದು ಅವರು ಹೇಳಿದ್ದಾರೆ. gajapade6 .. # .. . @ 💀 ../Xpwg0YOCX6