ರಿಷಭ್ ಶೆಟ್ಟಿಗೆ ರಜಿನಿ ನೀಡಿದ ಸುವರ್ಣ ಸ್ಮರಣಿಕೆಗಳು... ಸೂಪರ್ ಸ್ಟಾರ್ ರಜಿನಿಕಾಂತ್ ಇತ್ತೀಚೆಗೆ ಕಾಂತಾರ ನಿರ್ದೇಶಕ ರಿಷಭ್ ಶೆಟ್ಟಿಯನ್ನು ಭೇಟಿ ಮಾಡಿದ್ದರು. ಮುಂಬೈ: ಸೂಪರ್ ಸ್ಟಾರ್ ರಜಿನಿಕಾಂತ್ ಇತ್ತೀಚೆಗೆ ಕಾಂತಾರ ನಿರ್ದೇಶಕ ರಿಷಭ್ ಶೆಟ್ಟಿಯನ್ನು ಭೇಟಿ ಮಾಡಿದ್ದರು. ರಜಿನಿಕಾಂತ್ ತಮ್ಮನ್ನು ಭೇಟಿ ಮಾಡಿದ ರಿಷಭ್ ಶೆಟ್ಟಿಗೆ ಚಿನ್ನದ ಸರ ಹಾಗೂ ಲಾಕೆಟ್ ನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನೂ ಓದಿ: 'ನೀವು ಒಂದ್ ಸಲ ಹೊಗಳಿದ್ರೆ...' ರಜನಿಕಾಂತ್ ಭೇಟಿ ಬಳಿಕ ರಿಷಬ್ ಶೆಟ್ಟಿ ಹೇಳಿದ್ದೇನು?ಕಾಂತಾರ ಸಿನಿಮಾ ಯಶಸ್ವಿಯಾಗಿದ್ದಕ್ಕಾಗಿ ರಜನಿಕಾಂತ್ ರಿಷಭ್ ಶೆಟ್ಟಿಗೆ ಈ ಸುವರ್ಣ ಸ್ಮರಣಿಕೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ರಜಿನಿಕಾಂತ್, ಇಂತಹ ಸಿನಿಮಾಗಳು 50 ವರ್ಷಗಳಿಗೆ ಒಮ್ಮೆ ಮಾತ್ರ ಆಗುತ್ತವೆ ಎಂದು ಬಣ್ಣಿಸಿದ್ದರು. ಕಾಂತಾರ ಸಿನಿಮಾ ಕನ್ನಡ ಹಾಗೂ ಹಿಂದಿಯಲ್ಲಿ ಸೆ.30 ರಂದು ಹಾಗೂ ಅಕ್ಟೋಬರ್ 14 ರಂದು ಬಿಡುಗಡೆಯಾಗಿತ್ತು.