67ನೇ ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ 2022: ಧನಂಜಯ್, ಯಜ್ಞಾ ಶೆಟ್ಟಿ ಅತ್ಯುತ್ತಮ ನಟ, ನಟಿ; ಪುನೀತ್ಗೆ ಜೀವಮಾನ ಸಾಧನೆ ಪ್ರಶಸ್ತಿ ಮಾಸ್ಟರ್ ಪೀಸ್ “ಗರುಡ ಗಮನ ವೃಷಭ ವಾಹನ”ಕ್ಕಾಗಿ ಕನ್ನಡದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರಾಜ್ ಬಿ ಶೆಟ್ಟಿ ಪಡೆದರು. “ಆಕ್ಟ್ 1978” ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು. ಯಜ್ಞಾ ಶೆಟ್ಟಿ ಅವರು ತಮ್ಮ ಪಾತ್ರಕ್ಕಾಗಿ ಕನ್ನಡದ ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯನ್ನೂ ಪಡೆದರು ಬೆಂಗಳೂರು: ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳನ್ನು ಒಳಗೊಂಡಿರುವ ಭಾರತೀಯ ಚಲನಚಿತ್ರಗಳ ಶ್ರೀಮಂತಿಕೆಯನ್ನು ಸಾರುವ 67ನೇ ಪಾರ್ಲೆ ಫಿಲ್ಮ್ ಫೇರ್ ಸೌತ್ 2022 ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಇತ್ತೀಚೆಗೆ ಕಮರ್ ಫಿಲ್ಮ್ ಫ್ಯಾಕ್ಟರಿ ಆಯೋಜಿಸಿತು.2020 ಮತ್ತು 2021 ರ ನಡುವೆ ಎಲ್ಲಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾದ ಚಲನಚಿತ್ರಗಳ ಪೈಕಿ ದಕ್ಷಿಣ ಭಾರತದ ಅತ್ಯುತ್ತಮ ಚಲನಚಿತ್ರಗಳು, ನಟರು ಮತ್ತು ತಾಂತ್ರಿಕ ಪ್ರತಿಭೆಗಳನ್ನು ಅಸ್ಕರ್ ಬ್ಲ್ಯಾಕ್ ಲೇಡಿಯೊಂದಿಗೆ ಗೌರವಿಸಲಾಯಿತು. ಈ ಮೆಗಾ ಸಂಭ್ರಮಾಚರಣೆಯು ಉದ್ಯಾನ ನಗರಿ, ಬೆಂಗಳೂರಿನಲ್ಲಿ ಅಕ್ಟೋಬರ್ 9, 2022 ರಂದು ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ನಡೆಯಿತು.ಈ ವರ್ಷದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಅಲ್ಲು ಅರವಿಂದ್ ಅವರಿಗೆ ನೀಡಲಾಗಿದೆ. 100 ವರ್ಷ ಪೂರೈಸಿದ ತನ್ನ ತಂದೆಗೆ ಪ್ರಶಸ್ತಿಯನ್ನು ಸಮರ್ಪಿಸಿದರು. ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ತಾರೆ, ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಮಾಸ್ಟರ್ ಪೀಸ್ “ಗರುಡ ಗಮನ ವೃಷಭ ವಾಹನ”ಕ್ಕಾಗಿ ಕನ್ನಡದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರಾಜ್ ಬಿ ಶೆಟ್ಟಿ ಪಡೆದರು. “ಆಕ್ಟ್ 1978” ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು. ಯಜ್ಞಾ ಶೆಟ್ಟಿ ಅವರು ತಮ್ಮ ಪಾತ್ರಕ್ಕಾಗಿ ಕನ್ನಡದ ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯನ್ನೂ ಪಡೆದರು. ಬ್ಲಾಕ್ ಬಸ್ಟರ್ ಚಲನಚಿತ್ರ “ಬಡವ ರಾಸ್ಕಲ್’ಅಭಿನಯಕ್ಕಾಗಿ ಧನಂಜಯ ಅವರಿಗೆ ಕನ್ನಡದ ಅತ್ಯುತ್ತಮ ನಟ (ಪುರುಷ) ಪ್ರಶಸ್ತಿಯನ್ನು ನೀಡಲಾಯಿತು.ಪುಷ್ಪ: ದಿ ರೈಸ್ – ಭಾಗ 1 ಚಿತ್ರವು ತೆಲುಗು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದೆ. ಆಕ್ಷನ್ ಚಲನಚಿತ್ರದ ಅವರ ಅತ್ಯುತ್ತಮ ಅಭಿನಯಕ್ಕಾಗಿ, ಅಲ್ಲು ಅರ್ಜುನ್ ಅತ್ಯುತ್ತಮ ನಟ (ಪುರುಷ) ತೆಲುಗು ವಿಭಾಗದ ಅಡಿಯಲ್ಲಿ ವಿಜೇತರಾಗಿ ಹೊರಬಂದರು. ಅತ್ಯುತ್ತಮ ನಟಿ (ಮಹಿಳೆ) ಪ್ರಶಸ್ತಿಯನ್ನು “ಲವ್ ಸ್ಟೋರಿ”ಯ ಅತ್ಯುತ್ತಮ ಅಭಿನಯಕ್ಕಾಗಿ ಸಾಯಿ ಪಲ್ಲವಿ ಪಡೆದರು. ‘ಪುಷ್ಪ: ದಿ ರೈಸ್- ಭಾಗ 1’ ಚಿತ್ರಕ್ಕಾಗಿ ಪಾಪ್ಯುಲರ್ ಚಾಯ್ಸ್ ತೆಲುಗು ವಿಭಾಗದಿಂದ ನಿರ್ದೇಶಕ ಸುಕುಮಾರ್ ಬಂಡಾ ರೆಡ್ಡಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.ಜೈ ಭೀಮ್ ಚಿತ್ರಕ್ಕೆ ತಮಿಳಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಯಿತು. ನಿರ್ದೇಶಕಿ ಸುಧಾ ಕೊಂಗರ ಅವರ ಸೂಪರ್ ಹಿಟ್ ಚಿತ್ರ “ಸೂರರೈ ಪೊಟ್ರು”ಗಾಗಿ ಪಾಪ್ಯುಲರ್ ಚಾಯ್ಸ್ ತಮಿಳಿನ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಟರಾದ ಸೂರ್ಯ ಮತ್ತು ಲಿಜೋಮೋಲ್ ಜೋಸ್ ಅವರು ಅನುಕ್ರಮವಾಗಿ ಸೂರರೈ ಪೊಟ್ರು ಮತ್ತು ಜೈ ಭೀಮ್ ಚಲನಚಿತ್ರಗಳಲ್ಲಿ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟ (ಪುರುಷ ಮತ್ತು ಮಹಿಳೆ) ಪ್ರಶಸ್ತಿಯನ್ನು ಪಡೆದರು.“ದಿ ಗ್ರೇಟ್ ಇಂಡಿಯನ್ ಕಿಚನ್”ಚಿತ್ರಕ್ಕಾಗಿ ನಿಮಿಷಾ ಸಜಯನ್ ಅವರಿಗೆ ಅತ್ಯುತ್ತಮ ನಟಿ (ಮಹಿಳೆ) ಮಲಯಾಳಂ ಪ್ರಶಸ್ತಿಯನ್ನು ನೀಡಲಾಯಿತು. “ಅಯ್ಯಪ್ಪನುಂ ಕೊಶಿಯುಂ” ಚಿತ್ರದಲ್ಲಿ ಬಿಜು ಮೆನನ್ ಅವರ ಅತ್ಯುತ್ತಮ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟ (ಪುರುಷ) ಮಲಯಾಳಂ ವಿಭಾಗದ ಪ್ರಶಸ್ತಿ ಲಭಿಸಿತು. ಮಲಯಾಳಂ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಇದೇ ಚಿತ್ರದ ಪಾಲಾಯಿತು. ಅಂತಿಮವಾಗಿ ಮಲಯಾಳಂನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು “ತಿಂಕಲಜ್ಚ ನಿಶ್ಚಯಂ” ಚಿತ್ರಕ್ಕಾಗಿ ಸೆನ್ನಾ ಹೆಗ್ಡೆ ಅವರಿಗೆ ನೀಡಲಾಯಿತು.